ತ್ರಿಶೂರ್ ಪೂರಂ ಹಬ್ಬಕ್ಕೆ ಆಂಬ್ಯುಲೆನ್ಸ್ನಲ್ಲಿ ತೆರಳಿದ್ದ ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಮತ್ತು ಮೋಟಾರು ವಾಹನ ಕಾಯ್ದೆಯ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುರೇಶ್ ಗೋಪಿ ಅವರು ಪೊಲೀಸರು ಹಾಕಿರುವ ನಿರ್ಬಂಧಗಳನ್ನು ಉಲ್ಲಂಘಿಸಿ, ಪೂರಂ ಸ್ಥಳ ತಲುಪಲು ಆಂಬ್ಯುಲೆನ್ಸ್ ಬಳಸಿಕೊಂಡಿದ್ದಾರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ಸ್ಥಳೀಯ ಸಿಪಿಐ ಮುಖಂಡ ಕೆ.ಪಿ.ಸುಮೇಶ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ತಮ್ಮ ಕಾರಿನಲ್ಲಿ ಉತ್ಸವದ ಸ್ಥಳದ ಸಮೀಪಕ್ಕೆ ತಲುಪಿದ್ದೆ. ಈ ವೇಳೆ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳ ಕೆಲವು ಗೂಂಡಾಗಳು ಕಾರಿನ ಮೇಲೆ ದಾಳಿ ನಡೆಸಿದ್ದರು ಆರೋಪಿಸಿದ್ದಾರೆ. ತಾನು ಆಂಬ್ಯುಲೆನ್ಸ್ನಲ್ಲಿ ಉತ್ಸವದ ಸ್ಥಳಕ್ಕೆ ತಲುಪಿದ್ದೇನೆ ಎಂಬ ಆರೋಪಗಳನ್ನು ಸುರೇಶ್ ಗೋಪಿ ನಿರಾಕರಿಸಿದ್ದಾರೆ.
ಕೆಲವರು ನನ್ನನ್ನು ಅಲ್ಲಿಂದ ರಕ್ಷಿಸಿದ್ದರು, ಉತ್ಸವದ ಸ್ಥಳದಲ್ಲಿದ್ದ ಆಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋದರು ಎಂದು ಸುರೇಶ್ ಗೋಪಿ ಹೇಳಿದ್ದಾರೆ. ಈ ಹಿಂದೆ, ಉತ್ಸವದ ಸ್ಥಳಕ್ಕೆ ಪ್ರಯಾಣಿಸಲು ಆಂಬ್ಯುಲೆನ್ಸ್ ಅನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕೆಂದು ಗೋಪಿ ಒತ್ತಾಯಿಸಿದರು.