ನವದೆಹಲಿ: ದೀಪಾವಳಿ ದಿನದಂದೇ ದೆಹಲಿಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಗುರುವಾರ(ಅ.31) ರಾತ್ರಿ ಶಹದಾರಾ ಪ್ರದೇಶದಲ್ಲಿ ತಂದೆ, ಪುತ್ರ ಹಾಗೂ ಸೋದರಳಿಯ ಸೇರಿ ಮನೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಸೋದರಳಿಯ ಹಾಗೂ ಚಿಕ್ಕಪ್ಪನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ನಡೆದಿದೆ.
ಮೃತರನ್ನು ಆಕಾಶ್ (40) ಮತ್ತು ಅವರ ಸೋದರಳಿಯ ರಿಷಭ್ (16) ಎಂದು ಗುರುತಿಸಲಾಗಿದೆ.
ಗುಂಡಿನ ದಾಳಿಯಲ್ಲಿ ಆಕಾಶ ಅವರ 10 ವರ್ಷದ ಮಗ ಕ್ರಿಶ್ ಗಾಯಗೊಂಡಿದ್ದಾನೆ.
ದೆಹಲಿಯ ಈಶಾನ್ಯ ಭಾಗದ ಶಾಹಾದಾರ ಪ್ರದೇಶದಲ್ಲಿ ತಮ್ಮ ಮನೆಯ ಮುಂದೆ ಆಕಾಶ್ ಮಗ ಕಿಶ್ ಹಾಗೂ ಸೋದರಳಿಯ ದೀಪಾವಳಿಯ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು ಅದರಂತೆ ಮನೆಯ ಮುಂದೆ ಪಟಾಕಿ ಸಿಡಿಸುತ್ತಿದ್ದರು ಒಂಬತ್ತು ಗಂಟೆಯ ಸುಮಾರಿಗೆ ಸ್ಕೂಟಿಯಲ್ಲಿ ಬಂದ ಇಬ್ಬರು ಅಪರಿಚಿತರು ಮಾತನಾಡುವ ನೆಪದಲ್ಲಿ ಆಕಾಶ್ ಅವರ ಮೇಲೆ ಗುಂಡು ಹಾರಿಸಿದ್ದಾರೆ ಇದಾದ ಬಳಿಕ ಸೋದರಳಿಯನ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ ಈ ವೇಳೆ ತಡೆಯಲು ಹೋದ ಆಕಾಶ್ ಅವರ ಮಗ ಕ್ರಿಶ್ ಮೇಲು ಗುಂಡಿನ ದಾಳಿ ನಡೆಸಿದ್ದಾರೆ.