ಶಕ್ತಿ ಯೋಜನೆ ಯಥಾಸ್ಥಿತಿ ಮುಂದುವರೆಯಲಿದೆ: ಡಿಕೆಶಿ ಸ್ಪಷ್ಟನೆ

Prasthutha|

ಬೆಂಗಳೂರು: ಶಕ್ತಿ ಯೋಜನೆ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

- Advertisement -


ಕಳೆದ ಒಂದು ದಿನದ ಹಿಂದೆಯಷ್ಟೇ ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಸುಳಿವು ಕೊಟ್ಟಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಮರುದಿನವೇ ಯುಟರ್ನ್ ಹೊಡೆದಿದ್ದಾರೆ.


ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಪಂಚ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಶಕ್ತಿ ಯೋಜನೆಯಲ್ಲೂ ಯಾವುದೇ ಪರಿಷ್ಕರಣೆ ಇಲ್ಲ. ನನ್ನ ಹೇಳಿಕೆ ತಿರುಚಲಾಗಿದೆ ಎಂದು ತಿಳಿಸಿದ್ದಾರೆ.

- Advertisement -


ಮುಂದುವರಿದು, ನಮ್ಮ ಸರ್ಕಾರವನ್ನ ಷಡ್ಯಂತ್ರದಿಂದ ಕೆಡವಲು ಯಾರ ಹಣೆಯಲ್ಲೂ ಬರೆದಿಲ್ಲ. ಇನ್ನೂ ಎಂಟೂವರೆ ವರ್ಷ ನಮ್ಮದೇ ಸರ್ಕಾರ ಎಂದು ಕೇಂದ್ರ ಸಚಿವ ಹೆಚ್ ಡಿಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.




Join Whatsapp