ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

Prasthutha|

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) ಡಿಪ್ಲೊಮಾ ಟ್ರೈನಿ ಮತ್ತು ಜೂನಿಯರ್ ಆಫೀಸರ್ ಟ್ರೈನಿ ಮತ್ತು ಅಸಿಸ್ಟೆಂಟ್ ಟ್ರೈನಿ ಸೇರಿದಂತೆ ಖಾಲಿಯಿರುವ 802 ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

- Advertisement -


ಆಸಕ್ತಿ ಹೊಂದಿರುವ ಹಾಗೂ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://www.powergrid.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ

  • ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್) : 600
  • ಡಿಪ್ಲೊಮಾ ಟ್ರೈನಿ (ಸಿವಿಲ್) : 66
  • ಜೂನಿಯರ್ ಆಫೀಸರ್ ಟ್ರೈನಿ (ಹೆಚ್ ಆರ್ ) : 79
  • ಜೂನಿಯರ್ ಆಫೀಸರ್ ಟ್ರೈನಿ (ಎಫ್& ಎ): 35
  • ಸಹಾಯಕ ಟ್ರೇನಿ (ಎಫ್ & ಎ ) : 22
  • ಒಟ್ಟು ಹುದ್ದೆಗಳು : 802

  • ಅರ್ಜಿ ಶುಲ್ಕ
  • ಡಿಪ್ಲೊಮಾ ಟ್ರೈನಿ ಮತ್ತು ಜೂನಿಯರ್ ಆಫೀಸರ್ ಟ್ರೈನಿ ಹುದ್ದೆಗಳಿಗೆ ರೂ 300.
  • ಅಸಿಸ್ಟೆಂಟ್ ಟ್ರೈನಿ (ಎಫ್&ಎ) ಹುದ್ದೆಗಳಿಗೆ ರೂ 200.
  • ಎಸ್ ಸಿ /ಎಸ್ ಟಿ / ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕಗಳು ಇರುವುದಿಲ್ಲ.

  • ಆಯ್ಕೆ ಪ್ರಕ್ರಿಯೆಗಳು
  • ಲಿಖಿತ ಪರೀಕ್ಷೆ / ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ಕಂಪ್ಯೂಟರ್ ಕೌಶಲ್ಯ ಪರೀಕ್ಷೆ (ಜೂನಿಯರ್ ಆಫೀಸರ್ ಟ್ರೈನಿ ಮತ್ತು ಅಸಿಸ್ಟೆಂಟ್ ಟ್ರೈನಿಗಳ ಆಯ್ಕೆಗಾಗಿ).

  • ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳು
  • ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್/ಸಿವಿಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಡಿಪ್ಲೊಮಾ (ಸಂಬಂಧಿತ ಎಂಜಿನಿಯರಿಂಗ್) ಪದವಿ ಹೊಂದಿರಬೇಕು.
  • ಜೂನಿಯರ್ ಆಫೀಸರ್ ಟ್ರೈನಿ (ಹೆಚ್ ಆರ್ ) ಹುದ್ದೆಗಳಿಗೆ ಪದವಿ (ಬಿಬಿಎ/ ಬಿಬಿಎಂ / ಬಿಬಿಎಸ್ ) ಪಡೆದಿರಬೇಕು.
  • ಜೂನಿಯರ್ ಆಫೀಸರ್ ಟ್ರೈನಿ (ಎಫ್&ಎ) ಹುದ್ದೆಗಳಿಗೆ ಅಭ್ಯರ್ಥಿಗಳು ಇಂಟರ್ ಸಿಎ/ಇಂಟರ್ ಸಿಎಂಎ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸಿನ ಮಿತಿ 18 ವರ್ಷ ಹಾಗೂ ಗರಿಷ್ಠ ಮಿತಿ 27 ವರ್ಷ ವಯಸ್ಸು ಮೀರಿರಬಾರದು.

  • ಪ್ರಮುಖ ದಿನಾಂಕಗಳು
  • ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಶುಲ್ಕ ಪಾವತಿ: 22-10-2024
  • ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ: 12-11-2024
  • ಪರೀಕ್ಷೆಯ ದಿನಾಂಕ:- ಜನವರಿ/ಫೆಬ್ರವರಿ 2025 ಆಗಿದ್ದು, ನಿಖರವಾದ ದಿನಾಂಕವನ್ನು ವೆಬ್ಸೈಟ್ನಲ್ಲಿ ಪ್ರತ್ಯೇಕವಾಗಿ ತಿಳಿಸಲಾಗುವುದು.



Join Whatsapp