ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅಭಿವೃದ್ಧಿ ಮಾಡಿಲ್ಲ, ಜನ ಕಾಂಗ್ರೆಸ್ ಕೈ ಹಿಡಿಯುತ್ತಾರೆ: ಡಿಕೆಶಿ

Prasthutha|

ಬೆಂಗಳೂರು: ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ಏನೂ ಕೆಲಸ ಮಾಡಿಲ್ಲ. ಹೀಗಾಗಿ ಈ ಬಾರಿ ಚನ್ನಪಟ್ಟಣದ ಜನ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -

ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಚುನಾವಣೆ ಮಾಡುತ್ತಿಲ್ಲ. ನಾನು, ರಾಮಲಿಂಗಾ ರೆಡ್ಡಿ ಅವರು ಸ್ಥಾನ ತೆರವಾದಾಗಿನಿಂದ ಕೆಲಸ ಮಾಡುತ್ತಿದ್ದೇವೆ. ಪ್ರತಿ ಮನೆ ಬಾಗಿಲಿಗೆ ಸರ್ಕಾರ ಹೋಗಿ ಕಷ್ಟ-ಸುಖ ಕೇಳಿದ್ದೇವೆ. ಪ್ರತಿ ಜಿಲ್ಲಾ ಪಂಚಾಯ್ತಿ, ನಗರ ಪಂಚಾಯ್ತಿ ಯಾರಿಗೆ ಏನು ಅಂತ ಸಮಸ್ಯೆ ಎಂದು ಕೇಳಿದ್ದೇವೆ. 22 ಸಾವಿರ ಕುಟುಂಬಗಳು ನನಗೆ ಅರ್ಜಿ ಸಲ್ಲಿಕೆ ಮಾಡಿವೆ. ಮನೆ ಕೊಟ್ಟಿಲ್ಲ, ರಸ್ತೆ ಇಲ್ಲ. ಬಗರಹುಕಂ ಜಾಗ ಕೊಟ್ಟಿಲ್ಲ ಎಂದು ನೋವು ಹೇಳಿ ಕೊಂಡಿದ್ದಾರೆ. ಯಾವ ಶಾಸಕರೂ ಬರಲಿಲ್ಲ. ಕುಮಾರಣ್ಣ ಬರಲಿಲ್ಲ. ಕುಮಾರಣ್ಣ ಇಂತಹ ಕಾರ್ಯಕ್ರಮ ಮಾಡಿಲ್ಲ ಎಂದು ದುಃಖ ನೋವು ಹೇಳಿಕೊಂಡಿದ್ದಾರೆ. ನಾನು ಸಿಎಂ ಬಳಿ ಹೋಗಿ 500 ಕೋಟಿ ವಿಶೇಷ ಅನುದಾನ ತೆಗೆದುಕೊಂಡು ಹೋಗಿ ನೀರಾವರಿ, ರಸ್ತೆಗೆ ಎಲ್ಲಾ ಮಾಡಿದ್ದೇವೆ. 5 ಸಾವಿರ ಮನೆಗಳನ್ನು ಮಂಜೂರಾತಿ ಮಾಡಿದ್ದೇವೆ. ಸೈಟ್ ಕೊಡಲು ಪ್ರಯತ್ನ ಮಾಡುತ್ತಿದ್ದೇವೆ. ನಮಗೆ ಎಲೆಕ್ಷನ್ ಮುಖ್ಯ ಅಲ್ಲ. ಜನರ ಬದುಕು ಬದಲಾವಣೆ ಮಾಡೋದು ಮುಖ್ಯ ಎಂದು ತಿಳಿಸಿದರು.

ಕುಮಾರಸ್ವಾಮಿ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ. ನಮಗೇನು ಬೇಜಾರು ಇಲ್ಲ. ಅವರ ಧರ್ಮಪತ್ನಿ ನಿಲ್ಲಿಸಿದ್ರು, ಅವರು ನಿಂತುಕೊಂಡ್ರು, ಈಗ ಮಗನನ್ನ ನಿಲ್ಲಿಸಿದ್ದಾರೆ. ಅದೆಲ್ಲ ನಿರೀಕ್ಷೆಯೇ. ಕಾರ್ಯಕರ್ತರನ್ನು ನಿಲ್ಲಿಸೋದಿಲ್ಲ ಎಂದು ನಮಗೂ ಗೊತ್ತಿತ್ತು.ನಮ್ ಡ್ಯೂಟಿ ನಾವು ಮಾಡ್ತಿದ್ದೇವೆ.ಚನ್ನಪಟ್ಟಣದ ಜನರ ಮೇಲೆ ನಮಗೆ ವಿಶ್ವಾಸ ಇದೆ. ನಮ್ಮ ಕೈ ಹಿಡಿಯುತ್ತಾರೆ. ನಮ್ಮ ಸರ್ಕಾರ ಬಲಿಷ್ಠವಾಗಿದೆ. ಸೇವೆ ಮಾಡುತ್ತೇವೆ. ಕುಮಾರಸ್ವಾಮಿ ಅಧಿಕಾರ ಇದ್ದಾಗ ಏನು ಮಾಡಲು ಆಗಿಲ್ಲ. ಇನ್ನು ಅಧಿಕಾರ ಇಲ್ಲದೇ ಇದ್ದಾಗ ಏನು ಮಾಡಲು ಸಾಧ್ಯ? ಅವರು ಏನೂ ಮಾಡಲು ಆಗಲ್ಲ ಎಂದು ಜನರಿಗೆ ಗೊತ್ತಿದೆ. ಇಲ್ಲಿ ಇರೋದು ರಾಜ್ಯ ಸರ್ಕಾರ. ಏನೇ ಆದರು ನಾವು ಮಾಡಬೇಕು. ಜನರ ಪಲ್ಲಕ್ಕಿ ಹೊರೋರು ನಾವೇ. ಜನರ ಕಷ್ಟಕ್ಕೆ ಆಗೋರು ನಾವೇ. ನಮ್ಮನ್ನ ಸ್ವೀಕಾರ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.




Join Whatsapp