ದರ್ಶನ್ ಗೆ ಜಾಮೀನು: ರೇಣುಕಾ ಸ್ವಾಮಿ ತಂದೆ ಹೇಳಿದ್ದೇನು?

Prasthutha|

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗೆ ಮಧ್ಯಂತರ ಜಾಮೀನು ದೊರೆತಿದೆ. ಆರು ವಾರಗಳ ಮಧ್ಯಂತರ ಜಾಮೀನನ್ನು ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದೆ.

- Advertisement -


ದರ್ಶನ್ ಗೆ ಜಾಮೀನು ಸಿಕ್ಕಿರುವ ಕುರಿತು ಪ್ರತಿಕ್ರಿಯೆ ನೀಡಿರುವ ರೇಣುಕಾ ಸ್ವಾಮಿ ತಂದೆ ಕಾಶೀನಾಥಯ್ಯ, ‘ಮಧ್ಯಂತರ ಜಾಮೀನು ಸಿಕ್ಕಿದೆ, ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ, ಅದು ನ್ಯಾಯಾಲಯ ಕೊಟ್ಟಿರುವ ಆದೇಶ, ದರ್ಶನ್ ಗೆ ಜಾಮೀನು ಸಿಕ್ಕಿರುವುದು ಅದೊಂದು ಕಾನೂನು ಕ್ರಮ, ಅದಕ್ಕೆ ಗೌರವ ಕೊಡುತ್ತೇವೆ’ ಎಂದಿದ್ದಾರೆ. ಆ ಮೂಲಕ ತಮಗೆ ನೋವಿದ್ದರೂ ಕಾನೂನು ಪ್ರಕ್ರಿಯೆಗೆ, ನ್ಯಾಯಾಲಯದ ಆದೇಶಕ್ಕೆ ಗೌರವ ಸಲ್ಲಿಸಿದ್ದಾರೆ.


‘ನಮಗೆ, ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ, ನಾವು ಕಾನೂನು ಹೋರಾಟ ಮಾಡುತ್ತೇವೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗುವವರೆಗೆ ನಮ್ಮ ಕಾನೂನು ಹೋರಾಟ ಮುಂದುವರೆಯಲಿದೆ’ ಎಂದಿದ್ದಾರೆ.




Join Whatsapp