ಜನನ- ಮರಣ ನೋಂದಣಿಗೆ CRS ಮೊಬೈಲ್ ಆ್ಯಪ್

Prasthutha|

ಜನನ ಹಾಗೂ ಮರಣ ನೋಂದಣಿಯನ್ನು ಇನ್ನಷ್ಟು ಸರಳಗೊಳಿಸಲು ಮೊಬೈಲ್ ಅಪ್ಲಿಕೇಷನ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.

- Advertisement -


‘ನಾಗರಿಕ ನೋಂದಣಿ ವ್ಯವಸ್ಥೆ’ (CRS-Civil Registration System) ಮೊಬೈಲ್ ಆ್ಯಪ್ ಅನ್ನು ಭಾರತ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತಾಲಯ ಅಭಿವೃದ್ಧಿಪಡಿಸಿದೆ. ಇದರಿಂದ ಜನನ ಹಾಗೂ ಮರಣ ನೋಂದಣಿಗೆ ಸದ್ಯ ತೆಗೆದುಕೊಳ್ಳುತ್ತಿರುವ ಸಮಯ ಕಡಿಮೆಯಾಗಲಿದೆ.

ಈ ನೂತನ ಆ್ಯಪ್ ಮೂಲಕ ನಾಗರಿಕರು ಜನನ ಹಾಗೂ ಮರಣ ನೋಂದಣಿಯನ್ನು ಎಲ್ಲಿಂದಲಾದರೂ, ಯಾವಾಗಲಾದರೂ ಮತ್ತು ಆಯಾ ರಾಜ್ಯಗಳ ಭಾಷೆಯಲ್ಲಿ ನೋಂದಾಯಿಸಬಹುದಾಗಿದೆ.

ಈ ಆ್ಯಪ್‌ನ ಬಳಕೆ ಹೇಗೆ? 

- Advertisement -


• ಗೂಗಲ್ ಪ್ಲೇಸ್ಟೋರ್ ಮೂಲಕ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಬಳಿಕ ಬಳಕೆದಾರರ ಐಡಿ ಮತ್ತು ಪಾಸ್ ವರ್ಡ್ ಹಾಕಿ ಲಾಗ್ ಇನ್ ಆಗಿರಿ.
• ಲಾಗ್ ಇನ್ ಪ್ರಕ್ರಿಯೆ ಪೂರ್ಣಗೊಳಿಸಲು ಆ್ಯಪ್ captcha ನೀಡುತ್ತದೆ. ಅದನ್ನು ನಮೂದಿಸಿದ ಬಳಿಕ ಎಸ್ ಎಂಎಸ್ ಮೂಲಕ ಒಟಿಪಿ ಬರಲಿದೆ. ಒಟಿಪಿ ಹಾಕಿದರೆ ಲಾಗ್ ಇನ್ ಆಗುತ್ತದೆ.
• ಹೋಮ್ ಸ್ಕ್ರೀನ್ ಮೇಲೆ ಜನನ ಮತ್ತು ಮರಣ ಎಂಬ ಎರಡು ಆಯ್ಕೆಗಳು ಕಾಣುತ್ತವೆ. ಯಾವ ಪ್ರಮಾಣಪತ್ರ ಬೇಕು ಎಂದು ಅದನ್ನು ಆಯ್ಕೆ ಮಾಡಿಕೊಳ್ಳಿ.
• ಹೋಮ್ ಸ್ಕ್ರೀನ್ ಮೇಲಿನ ಎಡಭಾಗದಲ್ಲಿರುವ ಮೂರು ಡಾಟ್ ಗಳ ಐಕಾನ್ ಕ್ಲಿಕ್ ಮಾಡಿದರೆ ಜನನ, ಮರಣ, ದತ್ತು, ಪ್ರೊಫೈಲ್, ಮತ್ತು ಪಾವತಿ ವಿವರಗಳು, ಸೇರಿಸಿ ಅಥವಾ ವೀಕ್ಷಿಸಿ ಹೀಗೆ ಮುಂತಾದ ಆಯ್ಕೆಗಳನ್ನು ಒದಗಿಸುತ್ತದೆ.
• ಜನನ ಪ್ರಮಾಣ ಪತ್ರಕ್ಕಾಗಿ, ಜನನ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಕೊಟ್ಟಿರುವ ಸ್ಥಳದಲ್ಲಿ ಮಗುವಿನ ಹುಟ್ಟಿದ ದಿನಾಂಕ, ವಿಳಾಸ, ಕುಟುಂಬದ ಮಾಹಿತಿಯನ್ನು ನಮೂದಿಸಿ. (ಇದೇ ರೀತಿ ಮರಣ ಪ್ರಮಾಣ ಪತ್ರಕ್ಕೆ ಮರಣ ಎನ್ನುವ ಆಯ್ಕೆ ಕ್ಲಿಕ್ ಮಾಡಿ, ವ್ಯಕ್ತಿ ಮರಣ ಹೊಂದಿದ ದಿನಾಂಕ ಹಾಗೂ ಇತರ ಮಾಹಿತಿಗಳನ್ನು ನಮೂದಿಸಿ)
• ಬಳಿಕ ಹಣ ಪಾವತಿ ಮಾಡಬೇಕಾಗುತ್ತದೆ. ಹಣ ಪಾವತಿಯಾಗುತ್ತಿದ್ದಂತೆ, ಪ್ರಮಾಣಪತ್ರ ತಯಾರಾಗುತ್ತದೆ.
• ಇದೇ ಆ್ಯಪ್ ನಲ್ಲಿ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.




Join Whatsapp