ಮುಡಾ ಪ್ರಕರಣ: ರಾಕೇಶ್ ಪಾಪಣ್ಣ ಮನೆ ಮೇಲಿನ 32 ಗಂಟೆಗಳ ಇಡಿ ದಾಳಿ ಅಂತ್ಯ

Prasthutha|

ಮೈಸೂರು: ಮುಡಾ ಹಗರಣದ ತನಿಖೆ ಚುರುಗೊಳಿಸಿರುವ ಜಾರಿ ನಿರ್ದೇಶನಾಲಯ ಸೋಮವಾರದಿಂದ ಮೈಸೂರಿನ ಹಲವು ಕಡೆ ದಾಳಿ ನಡೆಸಿದೆ. ಈ ಮಧ್ಯ ಇನಕಲ್ ರಾಕೇಶ್ ಪಾಪಣ್ಣ ನಿವಾಸದಲ್ಲಿ 5 ಇಡಿ ಅಧಿಕಾರಿಗಳು ಸತತ 32 ಗಂಟೆಗಳ ಕಾಲ ಸುದೀರ್ಘ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳು ಕೆಲವು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

- Advertisement -


ಮುಡಾ ಅಕ್ರಮದಲ್ಲಿ ದೊಡ್ಡ ಪ್ರಮಾಣದ ನಿವೇಶನಗಳನ್ನು ಬೇರೆ – ಬೇರೆ ಹೆಸರಿನಲ್ಲಿ ಪಡೆದು ಅವುಗಳನ್ನು ಅಕ್ರಮವಾಗಿ ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ ಪ್ರಕರಣದಲ್ಲಿ ಹಿನಕಲ್ ನ ರಾಕೇಶ್ ಪಾಪಣ್ಣ ಮನೆಯ ಮೇಲೆ ಸೋಮವಾರ ದಾಳಿ ನಡೆದಿತ್ತು. ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಐದು ಜನರ ಇಡಿ ಅಧಿಕಾರಿಗಳ ತಂಡ ಮಂಗಳವಾರ ಸಂಜೆ 6 ಗಂಟೆವರೆಗೆ ಸುದೀರ್ಘವಾಗಿ 32 ಗಂಟೆಗಳ ಕಾಲ ಮುಡಾಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು. ಈ ಬಗ್ಗೆ ಇಡಿ ಅಧಿಕಾರಿಗಳು ಸಂಪೂರ್ಣ ದಾಖಲಾತಿಗಳನ್ನು ಪಡೆದು ದಾಳಿ ಅಂತ್ಯಗೊಳಿಸಿ ವಾಪಸ್ ಆಗಿದ್ದಾರೆ. ಈ ಸಂದರ್ಭ ರಾಕೇಶ್ ಪಾಪಣ್ಣ ಅವರಿಗೆ ಸಂಬಂಧಿಸಿದ ಹಲವು ದಾಖಲೆಗಳ ಮಾಹಿತಿಗಳನ್ನು ನೀಡುವಂತೆ ತಿಳಿಸಿ ಹೊರಟಿದ್ದಾರೆ.


ಈ ರಾಕೇಶ್ ಪಾಪಣ್ಣ ಕುಟುಂಬ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಕುಟುಂಬದ ಪಾತ್ರದ ಬಗ್ಗೆ 50:50 ಅನುಪಾತದಲ್ಲಿ ಸಿಎಂ ಶಿಫಾರಸ್ಸಿನ ಬಗ್ಗೆ ಹಾಗೂ ಸಿಎಂ ಮಗ ಯತೀಂದ್ರ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ರಾಕೇಶ್ ಪಾಪಣ್ಣ ಅವರಿಂದ ಇಡಿ ಅಧಿಕಾರಿಗಳು ಮಾಹಿತಿ ಪಡೆದರು ಎಂಬ ಅಂಶ ಮೂಲಗಳಿಂದ ತಿಳಿದು ಬಂದಿದೆ.




Join Whatsapp