ಹೈದರಾಬಾದ್ | ಪಟಾಕಿ ಅಂಗಡಿಯಲ್ಲಿ ಭೀಕರ ಅಗ್ನಿ ಅವಘಡ: ಗ್ರಾಹಕರು ಅಪಾಯದಿಂದ ಪಾರು

Prasthutha|

- Advertisement -

ಹೈದರಾಬಾದ್ : ದೀಪಾವಳಿ ನಿಮಿತ್ತ ಮಾರುಕಟ್ಟೆಗಳಲ್ಲಿ ಪಟಾಕಿ ಅಂಗಡಿಗಳನ್ನೂ ತೆರೆಯಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅತ್ಯಂತ ಮುಂಜಾಗ್ರತಾ ಕ್ರಮದ ಅಗತ್ಯವಿದೆ ಆದರೆ ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಪಟಾಕಿ ಅಂಗಡಿಗೆ ಬೆಂಕಿ ತಗುಲಿದ ಪ್ರಕರಣ ಬೆಳಕಿಗೆ ಬಂದಿದೆ.

ಇದ್ದಕ್ಕಿದ್ದಂತೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಮತ್ತು ನಂತರ ಪಟಾಕಿಗಳು ಸಿಡಿಯುವ ಶಬ್ದಗಳು ಬರಲಾರಂಭಿಸಿದವು. ಒಂದರ ಹಿಂದೆ ಒಂದರಂತೆ ಸ್ಫೋಟಗಳು ಸಂಭವಿಸಲಾರಂಭಿಸಿದವು.

- Advertisement -

ಪರಿಣಾಮ ರೆಸ್ಟೋರೆಂಟ್ ಮತ್ತು 7-9 ಕಾರುಗಳು ಸುಟ್ಟುಹೋಗಿವೆ. ಒಬ್ಬ ಮಹಿಳೆ ಗಾಯಗೊಂಡಿದ್ದಾರೆ.

ಅಗ್ನಿಶಾಮಕ ದಳದ ವಾಹನಗಳು ಬೆಂಕಿ ಅವಘಡದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸುಲ್ತಾನ್ ಬಜಾರ್ ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ್ದಾರೆ.




Join Whatsapp