ಡಿಕೆಶಿ ಮುಖ್ಯಮಂತ್ರಿಯಾಗುವ ಉಪ ಚುನಾವಣೆ ಇದು: ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ

Prasthutha|

- Advertisement -

ಚನ್ನಪಟ್ಟಣ: ಡಿಕೆ ಶಿವಕುಮಾರ್ ಅವರು​ ಮುಖ್ಯಮಂತ್ರಿ ಆಗುವ ಉಪ ಚುನಾವಣೆ ಇದು ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಭಾನುವಾರ ಹೇಳಿದ್ದಾರೆ.

ಈ ಮೂಲಕ ಕಾಂಗ್ರೆಸ್​ನಲ್ಲಿ ಸಂಚಲನ ಮೂಡಿಸಿದ್ದಾರೆ.

- Advertisement -

ಇಂದು ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಶಿವಲಿಂಗೇಗೌಡ ಅವರು, ಡಿಕೆ ಶಿವಕುಮಾರ್​ ಮುಖ್ಯಮಂತ್ರಿ ಆಗುವ ಉಪ ಚುನಾವಣೆ ಇದು. ಉಪಚುನಾವಣೆ ಫಲಿತಾಂಶ ಡಿ.ಕೆ.ಶಿವಕುಮಾರ್​ ನಾಯಕತ್ವವನ್ನು ತೋರಿಸುತ್ತೆ. ನೀವು ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಅವರನ್ನು ಬಿಟ್ಟುಕೊಡಬಾರದು. ರಾಜ್ಯದ ರಾಜಕಾರಣದ ತಿರುವು ಚನ್ನಪಟ್ಟಣ ಕ್ಷೇತ್ರದಿಂದ ಶುರುವಾಗುತ್ತೆ ಎಂದು ಹೇಳಿದರು.

ಡಿಕೆ ಶಿವಕುಮಾರ್ ಅವರಿ​​ಗೆ ಡಿ.ಕೆ.ಸುರೇಶ್​ರನ್ನ ನಿಲ್ಲಿಸಿ ಗೆಲ್ಲಿಸಿ ಕೊಡೋದಕ್ಕೆ ಆಗುತ್ತಿರಲಿಲ್ವಾ? ಆದರೆ ಯೋಗೇಶ್ವರ್ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ತ್ಯಾಗ ಮಾಡಿದ್ದಾರೆ. ರಾಜಕೀಯ ಜೀವನ ಉಳಿಸಿಕೊಳ್ಳಲು ಕುಮಾರಸ್ವಾಮಿ​​​ ಬಿಜೆಪಿಗೆ ಹೋದ್ರು. ಇಲ್ಲದಿದ್ರೆ ಎಚ್​ಡಿಕೆ ರಾಜಕಾರಣ ಮುಗಿದೇ ಹೋಗ್ತಿತ್ತು. ಕುಮಾರಸ್ವಾಮಿ ತಮ್ಮ ಕುಟುಂಬ ಅಷ್ಟೇ ಬದುಕಿದ್ರೆ ಸಾಕು ಅನ್ನೋ ಥರದಲ್ಲಿದ್ದಾರೆ ಎಂದು ಎಚ್​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.




Join Whatsapp