ಅಹ್ಮದಾಬಾದ್: ಪಾಕಿಸ್ತಾನಿ ಏಜೆಂಟ್ಗೆ ಭಾರತೀಯ ಕೋಸ್ಟ್ ಗಾರ್ಡ್ ನೌಕೆಗಳ ಕುರಿತು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಪೋರಬಂದರ್ ನಿವಾಸಿ
ಪಂಕಜ್ ಕೋಟಿಯಾನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.
ಏಜೆಂಟ್, ತಾನು ಮುಂಬೈ ಮೂಲದ ಮಹಿಳೆ ʼರಿಯಾʼ ಎಂದು ಪರಿಚಯಿಸಿಕೊಂಡಿದ್ದಳು ಎಂದು ಎಟಿಎಸ್ ಪೊಲೀಸ್ ವರಿಷ್ಠಾಧಿಕಾರಿ ಕೆ ಸಿದ್ಧಾರ್ಥ್ ಹೇಳಿದ್ದಾರೆ.
ಜೆಟ್ಟಿಯಲ್ಲಿ ಕಾರ್ಮಿಕನಾಗಿದ್ದ ಪಂಕಜ್ ಕೋಟಿಯಾನನ್ನು ಫೇಸ್ ಬುಕ್ ನಲ್ಲಿ ಎಂಟು ತಿಂಗಳ ಹಿಂದೆ ‘ರಿಯಾ’ ಪರಿಚಯಿಸಿಕೊಂಡಿದ್ದು, ಆ ಬಳಿಕ ಅವರಿಬ್ಬರೂ ಸಂಪರ್ಕದಲ್ಲಿದ್ದರು. ನಾನು ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ಮುಂಬೈನಲ್ಲಿ ನೆಲೆಸಿದ್ದೇನೆ ಎಂದು ‘ರಿಯಾ’ ಕೋಟಿಯಾಗೆ ಹೇಳಿದ್ದಳು ಎಂದು ಅಧಿಕಾರಿ ಹೇಳಿದ್ದಾರೆ.
ಐಸಿಜಿ ಹಡಗುಗಳು ಮತ್ತು ಜೆಟ್ಟಿಯ ಸ್ಥಳ ಮತ್ತು ಇತರ ವಿವರಗಳ ಕುರಿತು ಅವರು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿರುವ ವಾಟ್ಸಾಪ್ ಸಂಖ್ಯೆಯು ಪಾಕಿಸ್ತಾನಕ್ಕೆ ಸೇರಿದೆ ಎಂದು ಎಸ್ಪಿ ತಿಳಿಸಿದ್ದಾರೆ.