ಮಂಗಳೂರು | ದ್ವೇಷ ಭಾಷಣ ಪ್ರಕರಣ: ಅರುಣ್ ಉಳ್ಳಾಲ್‌ಗೆ ನಿರೀಕ್ಷಣಾ ಜಾಮೀನು

Prasthutha|

- Advertisement -

ಮಂಗಳೂರು: ಧರ್ಮ ದ್ವೇಷದ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಅರುಣ್ ಉಳ್ಳಾಲ್ ರವರಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಮಂಗಳೂರಿನ ಉಳ್ಳಾಲ ತಾಲೂಕಿನ ಕಿನ್ಯಾದ ಕೇಶವ ಶಿಶುಮಂದಿರದಲ್ಲಿ ನಡೆದ ನವದಂಪತಿ ಸಮಾವೇಶದಲ್ಲಿ ಭಾಷಣ ಮಾಡಿದ್ದ ಡಾ.ಅರುಣ್ ಉಳ್ಳಾಲ್, ಬೇರೆ ಧರ್ಮಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ಮಾತನಾಡಿದ ಆರೋಪದ ಹಿನ್ನೆಲೆ ಮಂಗಳೂರು ಸೆನ್ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು.

- Advertisement -

ಭಾಷಣದಲ್ಲಿ ಹೇಳಿದ್ದೇನು?

ಭಾಷಣ ಮಾಡುತ್ತಾ ‘ಹಿಂದುಗಳು ಹಿಂದು ಮಾಲಿಕತ್ವದ ಸಭಾಂಗಣದಲ್ಲೆ ಮದುವೆ ಆಗಬೇಕು. ಹಿಂದು ಮಾಲಿಕತ್ವದ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು. ಅನ್ಯ ಧರ್ಮೀಯರ ಸಭಾಂಗಣದಲ್ಲಿ ಮದುವೆ ಆಗಬಾರದು. ಅವರ ಶಾಲೆಗಳಿಗೆ ಕಳುಹಿಸಬಾರದು, ಅವರಿಗೆ ನಿಮ್ಮಿಂದ ಸಲ್ಲುವ ಆದಾಯದ ಒಂದು ಪಾಲು ವಿದೇಶಕ್ಕೆ ಸಲ್ಲುತ್ತದೆ ಎಂದು ಅರುಣ್ ಉಳ್ಳಾಲ್ ಅವರು ಹೇಳಿದ್ದರು.

ಇಂದು ಮಂಗಳೂರಿನ ಜಿಲ್ಲಾ ನ್ಯಾಯಾಲಯ ಅರುಣ್ ಉಳ್ಳಾಲ್ ರವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.



Join Whatsapp