ರೈತರ ಭೂಮಿ ವಕ್ಫ್ ಪಾಲಾಗುವುದಿಲ್ಲ: ಸಚಿವ ಎಂಬಿ ಪಾಟೀಲ್

Prasthutha|

- Advertisement -

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 10 ಸರ್ವೇ ನಂಬರುಗಳ 11 ಎಕರೆ ಆಸ್ತಿ ಮಾತ್ರ ವಕ್ಫ್ ಆಸ್ತಿ ಎಂದು ಗೆಜೆಟ್ ನೋಟಿಫಿಕೇಷನ್ ಆಗಿರುವುದು ವಿವಾದಕ್ಕೀಡಾಗಿದೆ. ಆ ಬಗ್ಗೆ ಸಚಿವ ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

“ಒಟ್ಟು 1,200 ಎಕರೆಯಲ್ಲಿ ಅದರಲ್ಲಿ 10 ಎಕರೆ 14 ಗುಂಟೆ ಖಬರಸ್ತಾನ ಇದೆ. ಉಳಿದದ್ದು ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ. ಇನ್ನು ಈ ಭೂಮಿಯು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರಿದ್ದು, ಯಾವುದೇ ರೈತರ ಖಾಸಗಿ ಜಮೀನು ಒಳಪಟ್ಟಿಲ್ಲ ಎಂಬುದನ್ನು ಗಮನಿಸಬೇಕು’’ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ

- Advertisement -

ವಿಜಯಪುರದ ಹಜರತ್ ಪೀರ ದಸ್ತಿಗೀರ ಸಾಬ್ ಮೊಹಮ್ಮದ ಚಿಂಗ್ ಸಿಯಾ ತಖಿಯಾ ದರ್ಗಾ ಮಹಾಲಬಾಗಯತ ಅವರಿಗೆ ಸೇರಿದ ಆಸ್ತಿಯಾಗಿದೆ. ಕೆಳಗಡೆ ತಪ್ಪಾಗಿ ಹೊನವಾಡ ಎಂದು ಸೇರಿಕೊಂಡಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. ಈ ಯಾವ ರೈತರಿಗೂ ವಕ್ಫ ಸಮಿತಿ ಅಥವಾ ಸರ್ಕಾರದ ಇಲಾಖೆಯಿಂದ ಯಾವುದೇ ನೋಟಿಸ್ ಗಳು ಬಂದಿಲ್ಲ.

“ಈಗಾಗಲೇ ಜಿಲ್ಲೆಯಲ್ಲಿ ಹಲವು ರೈತರಿಗೆ ವಕ್ಫ್ ಆಸ್ತಿ ನೋಟಿಸು ಬಂದಿದೆ’’ ಎಂಬ ದೂರುಗಳಿದ್ದು, “ವಕ್ಫ್ ಸಮಿತಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಎಲ್ಲ ದಾಖಲೆಗಳನ್ನು ಕೂಲಕುಂಷವಾಗಿ ಪರಿಶೀಲಿಸುತ್ತಾರೆ. ಒಂದೆ ಒಂದು ಇಂಚು ರೈತರ ಜಾಗವು ಅನಗತ್ಯವಾಗಿ, ಆಧಾರ, ದಾಖಲೆಗಳಿಲ್ಲದೆ ವಕ್ಫ್ ಆಸ್ತಿ ಎಂದು ಸೇರಿಸಲಾಗುವುದಿಲ್ಲ’’ ಎಂದು ಹೇಳಿದ್ದಾರೆ.




Join Whatsapp