ಮಧ್ಯಪ್ರದೇಶ: ಪತಿಯನ್ನು ಮರಕ್ಕೆ ಕಟ್ಟಿಹಾಕಿ ನವವಿವಾಹಿತೆ ಮೇಲೆ 8 ಮಂದಿಯಿಂದ ಗ್ಯಾಂಗ್ ರೇಪ್

Prasthutha|

ಭೋಪಾಲ್: ಗಂಡನ ಜತೆಗೆ ಪಿಕ್ನಿಕ್ ತೆರಳಿದ್ದ ನವ ವಿವಾಹಿತೆ ಮೇಲೆ ಎಂಟು ಮಂದಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಗುರ್ಹ್ ಪ್ರದೇಶದಲ್ಲಿ ನಡೆದಿದೆ.

- Advertisement -

ಎಲ್ಲ ಆರೋಪಿಗಳು ಕೂಡ 19 -21 ವರ್ಷ ವಯಸ್ಸಿನವರಾಗಿದ್ದಾರೆ. ಆರೋಪಿಗಳನ್ನು ರಾಮಕಿಶನ್ ಕೋರಿ, ದೀಪಕ್ ಕೋರಿ, ರವೀಶ್ ಗುಪ್ತಾ, ಸುಶೀಲ್ ಕೋರಿ, ರಾಜೇಂದ್ರ ಕೋರಿ, ಗರುಡ ಕೋರಿ, ಲವಕುಶ್ ಕೋರಿ ಮತ್ತು ರಜನೀಶ್ ಎಂದು ಗುರುತಿಸಲಾಗಿದೆ.


ಆರೋಪಿಗಳು ತಮ್ಮ ಹೇಯ ಕೃತ್ಯದ ವಿಡಿಯೋವನ್ನು ಕೂಡ ಚಿತ್ರೀಕರಿಸಿದ್ದು, ಘಟನೆ ಕುರಿತು ಯಾರಿಗಾದರೂ ಹೇಳಿದರೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಗುರ್ಹ್ ಪೊಲೀಸ್ ಠಾಣೆ ವ್ಯಾಪ್ತಿಯ ಬೈರವ್ ಬಾಬಾ ಸ್ಥಾನ್ ಎಂಬ ಪಿಕ್ನಿಕ್ ತಾಣದ ಸಮೀಪ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ಎಲ್ಲ ಎಂಟು ಆರೋಪಿಗಳು ಸ್ಥಳದ ಸಮೀಪ ಮದ್ಯಪಾನ ಮಾಡುತ್ತಿದ್ದರು. ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಐವರು ಆರೋಪಿಗಳಿದ್ದರೆ, ಉಳಿದ ಮೂವರು ಸಮೀಪದ ಸ್ಥಳದಲ್ಲಿದ್ದರು. ಅವರು ಕೂಡ ಅಲ್ಲಿಗೆ ತೆರಳಿ ಕೃತ್ಯ ಎಸಗಿದ್ದಾರೆ. ಐವರು ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆದರೆ ನಿಯಮಾವಳಿ ಪ್ರಕಾರ, ಉಳಿದ ಮೂವರ ವಿರುದ್ಧ ಕೂಡ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.


ಕೃತ್ಯ ಎಸಗುವುದಕ್ಕೂ ಮುನ್ನ ಆರೋಪಿಗಳು, ಮಹಿಳೆಯ ಗಂಡನನ್ನು ಅಮಾನುಷವಾಗಿ ಥಳಿಸಿ, ಸ್ಥಳದಿಂದ ಬೇರೆ ಕಡೆ ಎಳೆದೊಯ್ದಿದ್ದರು. ಆತನನ್ನು ಮರಕ್ಕೆ ಕಟ್ಟಿಹಾಕಿ, ನಂತರ ಸ್ಥಳಕ್ಕೆ ವಾಪಸಾಗಿ ಅತ್ಯಾಚಾರ ಎಸಗಿದ್ದರು.



Join Whatsapp