ಲೆಬನಾನ್: ಲೆಬನಾನ್ ನಲ್ಲಿ ವಸತಿಗೃಹವೊಂದನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದದಾಳಿಯಲ್ಲಿ ಮೂವರು ಪತ್ರಕರ್ತರು ಮೃತಪಟ್ಟಿದ್ದಾರೆ.
ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಮೂವರು ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ನಮ್ಮ ಕ್ಯಾಮರಾ ಮ್ಯಾನ್ ಘಾಸನ್ ನಜರ್ ಮತ್ತು ತಾಂತ್ರಿಕ ಸಹಾಯಕ ಮೊಹಮ್ಮದ್ ರಿದಾ ಮೃತಪಟ್ಟಿದ್ದಾರೆ ಎಂದು ಬೈರುತ್ ಮೂಲದ ಅಲ್-ಮಯಾದೀನ್ ಟಿವಿ ಹೇಳಿದೆ.
ಇದಲ್ಲದೆ, ಹಸ್ಬಯಾ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ನಮ್ಮ ಕ್ಯಾಮೆರಾ ಮ್ಯಾನ್ ವಿಸ್ಸಾಮ್ ಖಾಸಿಮ್ ಮೃತಪಟ್ಟಿದ್ದಾರೆ ಎಂದು ಹಿಜ್ಬುಲ್ಲಾಗೆ ಸೇರಿದ ಅಲ್-ಮನಾರ್ ಟಿವಿಹೇಳಿದೆ.