ನವದೆಹಲಿ: ಕೇಂದ್ರ ಸಚಿವ ಅಮಿತ್ ಶಾ ಅವರ ವಿದೇಶ ಪ್ರವಾಸದ ಬಗ್ಗೆ ಸಿಖ್ಸ್ ಫಾರ್ ಜಸ್ಟೀಸ್ (ಎಸ್ ಎಫ್ ಜೆ) ಸಂಘಟನೆಗೆ ಮಾಹಿತಿ ನೀಡಿದವರಿಗೆ ₹10 ಲಕ್ಷ ಬಹುಮಾನ ನೀಡುವುದಾಗಿ ಖಾಲಿಸ್ತಾನಿ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಘೋಷಿಸಿದ್ದಾರೆ.
1984ರ ಸಿಖ್ ಹತ್ಯಾಕಾಂಡದ ವೇಳೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಕಾನೂನುಬಾಹಿರ ಹತ್ಯೆಗಳು ಸೇರಿದಂತೆ ವಿವಿಧ ದೌರ್ಜನ್ಯಗಳನ್ನು ಎಸಗಿದ್ದಾರೆ. ಹಾಗಾಗಿ ದೇಶದಾದ್ಯಂತ ನವೆಂಬರ್ 26ರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಸಿಆರ್ ಪಿಎಫ್ ಶಾಲೆಗಳನ್ನು ಬಹಿಷ್ಕರಿಸಬೇಕು ಎಂದು ಗುರುಪತ್ವಂತ್ ಸಿಂಗ್ ಪನ್ನೂ ಒತ್ತಾಯಿಸಿದ್ದಾರೆ.
ಗೃಹ ಸಚಿವ ಶಾ ಅವರು ಭಾರತದ ಸಿಆರ್ ಪಿಎಫ್ ನ ನೇತೃತ್ವ ವಹಿಸುತ್ತಿದ್ದಾರೆ. ಕೆನಡಾದ ಸಿಖ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ನ್ಯೂಯಾರ್ಕ್ ನಲ್ಲಿ ಸಂಚು ರೂಪಿಸಿದ್ದರು ಎಂದು ಪನ್ನೂ ಆರೋಪಿಸಿದ್ದಾರೆ.
ನವೆಂಬರ್ 1ರಿಂದ 19ರವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಯಾರೂ ಪ್ರಯಾಣಿಸಬೇಡಿ ಎಂದೂ ಕೂಡ ಒತ್ತಾಯಿಸಿದ್ದರು.