5 ಕೋಟಿ ರೂ. ಬೇಡಿಕೆ: ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ ತರಕಾರಿ ವ್ಯಾಪಾರಿ ಅರೆಸ್ಟ್

Prasthutha|

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ಆರೋಪಿಯನ್ನು ಜಾರ್ಖಂಡ್ ನ ಜೆಮ್ ಶೆಡ್ ಪುರ ಮೂಲದ ತರಕಾರಿ ಮಾರಾಟಗಾರ ಶೇಖ್ ಹುಸೇನ್ ಮೌಸಿನ್(24) ಎಂದು ಗುರುತಿಸಲಾಗಿದೆ.


ನಗರ ಸಂಚಾರ ನಿಯಂತ್ರಣ ಕೊಠಡಿಯ ವಾಟ್ಸ್ ಆ್ಯಪ್ ಸಹಾಯವಾಣಿಗೆ ಕಳೆದ ವಾರ ₹5 ಕೋಟಿ ಬೇಡಿಕೆಯ ಬೆದರಿಕೆ ಸಂದೇಶ ಬಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅನೇಕ ತಂಡಗಳಾಗಿ ವಿವಿಧ ರಾಜ್ಯಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಿದ್ದರು.

- Advertisement -

ಆ ಸಂದೇಶದಲ್ಲಿ ಹೀಗೆ ಬರೆಯಲಾಗಿದೆ.. “ಸಲ್ಮಾನ್ ..ಈಗ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೊತೆಗಿನ ನಿಮ್ಮ ದ್ವೇಷವನ್ನು ಕೊನೆಗೊಳಿಸುತ್ತೇವೆ. ಇದಕ್ಕಾಗಿ ರೂ.5 ಕೋಟಿ ನೀಡಿ. ಲಾರೆನ್ಸ್ ಜೊತೆಗಿನ ವೈರತ್ವವನ್ನು ಕೊನೆಗಾಣಿಸಲು ಅಥವಾ ಬದುಕಲು ಬಯಸಿದರೆ ತಕ್ಷಣವೇ 5 ಕೋಟಿ ರೂ.ಗಳನ್ನು ಕಳುಹಿಸಿ. ಇಲ್ಲದಿದ್ದರೆ ಸಲ್ಮಾನ್ ಎನ್ ಸಿಪಿ ನಾಯಕ ಬಾಬಾ ಸಿದ್ದಿಕಿಗಿಂತ ಕೆಟ್ಟದ್ದನ್ನು ಎದುರಿಸಬೇಕಾಗುತ್ತದೆ” ಎಂದು 24 ವರ್ಷದ ಶೇಖ್ ಹುಸೇನ್ ಮೌಸಿನ್ ಆ ಎಚ್ಚರಿಕೆ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಮುಂಬೈ ಪೊಲೀಸರು ಈ ಸಂದೇಶದ ಸ್ಥಳವನ್ನು ಪತ್ತೆಹಚ್ಚಿದರು. ವಿಶೇಷ ತಂಡವನ್ನು ಜಾರ್ಖಂಡ್ ನ ಜೆಮ್ ಶೆಡ್ ಪುರಕ್ಕೆ ಕಳುಹಿಸಲಾಗಿದೆ. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮುಂಬೈ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಈ ಸಂದೇಶ ಕಳುಹಿಸಿದ ಯುವಕ ಶೇಖ್ ಹುಸೇನ್ ಮೌಸಿನ್ ನನ್ನು ಬಂಧಿಸಿದ್ದಾರೆ. ಈತ ಸಣ್ಣಪುಟ್ಟ ತರಕಾರಿ ವ್ಯಾಪಾರ ಮಾಡುತ್ತಿರುವುದು ಪತ್ತೆಯಾಗಿದೆ. ವಿಚಾರಣೆಗಾಗಿ ಮುಂಬೈಗೆ ಕರೆತರಲಾಗುವುದು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



Join Whatsapp