50 ಪೈಸೆ ಹಿಂದಿರುಗಿಸದ ಅಂಚೆ ಕಚೇರಿಗೆ 15,000 ದಂಡ..!

Prasthutha|

ಚೆನ್ನೈ: ಪ್ರತೀ ಪೈಸೆಗೂ ಬೆಲೆ ಇದೆ. 50 ಪೈಸೆ ಎಂದು ನಿರ್ಲಕ್ಷ ಮಾಡಿ ಗ್ರಾಹಕನಿಗೆ ಕೊಡದಿದ್ದರ ಫ‌ಲವಾಗಿ ಈಗ ಅಂಚೆ ಕಚೇರಿಗೆ ಬರೋಬ್ಬರಿ 15,000 ರೂ. ದಂಡ ವಿಧಿಸಲಾಗಿದೆ.

- Advertisement -

ಚೆನ್ನೈಯ ಮಾನ್ಶ ಎಂಬವರು 2023 ರ ಡಿಸೆಂಬರ್‌ನಲ್ಲಿ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ಡ್‌ ಪೋಸ್ಟ್‌ ಮಾಡಲು 30 ರೂ. ನೀಡಿದ್ದರು. ಅದಕ್ಕೆ ನಿಗದಿತ ಶುಲ್ಕ 29.50 ರೂ. ಆಗಿತ್ತು. ಬಾಕಿ 50 ಪೈಸೆ ಕೊಡಲು ಸಿಬ್ಬಂದಿ ಒಪ್ಪಿಲ್ಲ. ನಮ್ಮ ಕಂಪ್ಯೂಟರ್‌ ವ್ಯವಸ್ಥೆಯಲ್ಲಿ ಮೊತ್ತ ರೌಂಡಾಫ್ ಆಗಿದ್ದು, 30 ರೂ. ವನ್ನೇ ತೋರಿಸುತ್ತಿದ್ದು ಅಷ್ಟನ್ನೇ ಪಾವತಿ ಮಾಡಿ ಎಂದರು. ಅದಕ್ಕೆ ಒಪ್ಪದ ಮಾನ್ಶ, ಯುಪಿಐ ಮೂಲಕ ನಿಗದಿತ ಶುಲ್ಕ ಪಾವತಿ ಮಾಡುತ್ತೇನೆ ಎಂದರೂ ಸಿಬ್ಬಂದಿ ಒಪ್ಪಿರಲಿಲ್ಲ.

ಅಂಚೆ ಕಚೇರಿ ವಿರುದ್ಧ ಚೆನ್ನೈ ಜಿಲ್ಲಾ ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ನೀಡಿ “ಪ್ರತೀದಿನ ರೌಂಡಾಫ್ ಮಾಡುವು­ದರಿಂದ ಬೃಹತ್‌ ಮೊತ್ತ ಸಂಗ್ರಹಿಸಿದಂತಾಗುತ್ತದೆ. ಇದು ಕಪ್ಪುಹಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಮತ್ತು ಸರಕಾರಕ್ಕೆ ಬರುವ ಜಿ.ಎಸ್‌.ಟಿ. ನಷ್ಟವಾಗುತ್ತದೆ ಎಂದು ವಾದಿಸಿದ್ದರು. ಅದರ ವಿಚಾರಣೆ ನಡೆಸಿದ ವೇದಿಕೆ ಅಂಚೆ ಇಲಾಖೆಗೆ 15,000 ರೂ. ದಂಡ ವಿಧಿಸಿ ಆದೇಶಿಸಿದೆ.



Join Whatsapp