ಪ್ರಿಯಾಂಕಾ ಗಾಂಧಿ ಬಳಿ ಆಸ್ತಿ, ಚಿನ್ನ ಎಷ್ಟಿದೆ?

Prasthutha|

ವಯನಾಡು: ವಯನಾಡು ಲೋಕಸಭಾ ಉಪಚುನಾವಣಾ ಕಣದಲ್ಲಿರುವ ಪ್ರಿಯಾಂಕಾ ಗಾಂಧಿ ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದ್ದು ಅಫಿಡವಿತ್‌ನಲ್ಲಿ ಆಸ್ತಿ ಘೋಷಣೆ ಮಾಡಿದ್ದಾರೆ.

- Advertisement -

ಪ್ರಿಯಾಂಕಾ ಗಾಂಧಿ ವಾದ್ರಾ ಸುಮಾರು 12 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ, ಅವರ ಪತಿ ರಾಬರ್ಟ್ ವಾದ್ರಾ ಅವರು ಸುಮಾರು 66 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ಬಾಡಿಗೆ, ಬ್ಯಾಂಕ್‌ ಬಡ್ಡಿ ದರ, ಇತರ ಹೂಡಿಕೆಯಿಂದ 2023-24ರ ಹಣಕಾಸು ವರ್ಷದಲ್ಲಿ 46.39 ಲಕ್ಷ ರೂ. ಆದಾಯ ಬಂದಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಪ್ರಿಯಾಂಕಾ 4.24 ಕೋಟಿ ರೂ. ಚರಾಸ್ತಿ, 7.74 ಕೋಟಿ ರೂ. ಸ್ಥಿರಾಸ್ತಿಯನ್ನು ಹೊಂದಿದ್ದಾರೆ.

- Advertisement -

ಪ್ರಿಯಾಂಕಾ ಅವರ ಅತ್ಯಮೂಲ್ಯ ಆಸ್ತಿ ಶಿಮ್ಲಾ ಬಳಿಯಿರುವ ಅವರ 12,000 ಚದರ ಅಡಿ ಫಾರ್ಮ್‌ಹೌಸ್ ಆಗಿದೆ. ಅಫಿಡವಿಟ್ ಪ್ರಕಾರ ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ 5.64 ಕೋಟಿ ರೂ. ಆಗಿದೆ. 8 ಲಕ್ಷ ರೂ. ಮೌಲ್ಯದ ಹೋಂಡಾ ಸಿಆರ್‌ವಿ ಕಾರನ್ನು ಹೊಂದಿದ್ದಾರೆ. ಇದನ್ನು ಪತಿ ವಾದ್ರಾ ಉಡುಗೊರೆ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ



Join Whatsapp