ವಿಜಯಪುರ: ನಗರದ ನವಭಾಗ್ ರಸ್ತೆಯಲ್ಲಿರೋ ಫಿಶ್ ಟನಲ್ ಎಕ್ಸ್ಪೋದಲ್ಲಿ ಅವಘಡವೊಂದು ಸಂಭವಿಸಿದೆ.
ಫಿಶ್ ಟನಲ್ ಎಕ್ಸ್ಪೋದಲ್ಲಿ ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ಯುವತಿಯನ್ನು ನಿಖಿತಾ ಬಿರಾದಾರ್ ಎಂದು ಗುರುತಿಸಲಾಗಿದೆ.
ರೇಂಜರ್ ಸ್ವಿಂಗ್ನಲ್ಲಿ ಕುಳಿತಾಗಲೇ ನಿಖಿತಾಗೆ ಹಾಕಿದ್ದ ಬೆಲ್ಟ್ ಸರಿಯಾಗಿದೆಯಾ ಎಂದು ಆಕೆಯ ತಾಯಿ ಆಪರೇಟರ್ಗೆ ಪ್ರಶ್ನಿಸಿದ್ದಳು. ಅದಕ್ಕೆ ಆತ ಎಲ್ಲಾ ಓಕೆ ಎಂದಿದ್ದ. ಅಲ್ಲದೇ ಸ್ವಲ್ಪ ಸಮಯದ ಬಳಿಕ ಸಾಕು ನಿಲ್ಲಿಸಿ ನಿಲ್ಲಿಸಿ ಎಂದು ಆಪರೇಟರ್ ಬಳಿ ನಿಖಿತಾ ತಾಯಿ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಆದ್ರೆ, ಆಪರೇಟರ್ ಅದ್ಯಾವುದನ್ನೂ ಕೇಳಿಸಿಕೊಳ್ಳದೇ ಸುಮ್ಮನಾಗಿದ್ದಾನೆ. ಆಗ ನಿಖಿತಾಗೆ ಹಾಕಿದ್ದ ಬೆಲ್ಟ್ ಕಟ್ ಆಗಿ ಆಕೆ ಮೇಲಿಂದ ಕೆಳಗೆ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ.
ಫಿಶ್ ಟನಲ್ ಎಕ್ಸ್ಪೋದಲ್ಲಿ ತಲೆ ಕೆಲಗಾಗಿ ತಿರುಗಿಸೋ ಸುನಾಮಿಯಲ್ಲಿ ಕುಳಿತಿದ್ದ ಯುವತಿ ಕಳಪೆ ಬೆಲ್ಟ್ ಹಾಕಿದ್ದ ಪರಿಣಾಮ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ.