ಫರಂಗಿಪೇಟೆ : ಪಾಳುಬಿದ್ದ ಸಾರ್ವಜನಿಕ ಶೌಚಾಲಯ ದುರಸ್ಥಿಗೊಳಿಸಲು ಅಗ್ರಹ

Prasthutha|

- Advertisement -

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 75 ಹಾದುಹೋಗುವ ಫರಂಗಿಪೇಟೆಯಲ್ಲಿ ಪಾಳುಬಿದ್ದಿರುವ ಸಾರ್ವಜನಿಕ ಶೌಚಾಲಯವನ್ನು ದುರಸ್ಥಿಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕೆಂದು ಎಸ್‌ಡಿಪಿಐ ಪುದು ಗ್ರಾಮ ಸಮಿತಿ ನಿಯೋಗ ಪುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿತು.

ಫರಂಗಿಪೇಟೆ ವಸತಿ ಸಮುಚ್ಚಯ, ವಾಣಿಜ್ಯ ವಹಿವಾಟುಗಳು ನಡೆಯುವ ಮುಂದುವರಿಯುತ್ತಿರುವ ಪಟ್ಟಣವಾಗಿದ್ದು, ಜನನಿಬಿಡ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಜನರು ದಿನನಿತ್ಯ ಪರದಾಡುವಂತಾಗಿದೆ.‌ ಸಾರ್ವಜನಿಕರ ಹಿತದೃಷ್ಟಿಯಿಂದ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಬೇಕು ಅಥವಾ ಪಾಳುಬಿದ್ದಿರುವ ಸಾರ್ವಜನಿಕ ಶೌಚಾಲಯವನ್ನು ದುರಸ್ಥಿಗೊಳಿಸಿ ನಾಗರಿಕರಿಗೆ ಮೂಲಭೂತ ಸೌಕರ್ಯದ ವ್ಯವಸ್ಥೆ ಗೊಳಿಸಬೇಕು ಎಂದು ನಿಯೋಗ ಮನವಿಯಲ್ಲಿ ಆಗ್ರಹಿಸಿತು.

- Advertisement -

ಎಸ್‌‌ಡಿಪಿಐ ಪುದು ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಅಮೆಮ್ಮಾರ್, ಕಾರ್ಯದರ್ಶಿ ಅನ್ಸಾರ್ ಫರಂಗಿಪೇಟೆ, ಸದಸ್ಯರಾದ ಸಿರಾಜ್ ಕುಂಪನಮಜಲ್, ಮನ್ಸೂರ್ ಅಮೆಮ್ಮಾರ್, ಇಕ್ಬಾಲ್ ಅಮೆಮ್ಮಾರ್, ರಿಯಾಜ್ ಪೇರಿಮರ್ ನಿಯೋಗದಲ್ಲಿದ್ದರು.



Join Whatsapp