ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ಜೋರು ಶಬ್ದಕ್ಕೆ ಬೆಚ್ಚಿಬಿದ್ದ ಜನತೆ!

Prasthutha|

ವಿಜಯಪುರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ್ದು, ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

- Advertisement -

ಇಂದು(ಮಂಗಳವಾರ) ಬೆಳಿಗ್ಗೆ 11-29 ನಿಮಿಷಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ.

ಜೋರಾದ ಶಬ್ಧದೊಂದಿಗೆ ಭೂಮಿ ಕಂಪಿಸಿದೆ. ಜೋರು ಶಬ್ದಕ್ಕೆ ಅಡುಗೆ ಮನೆಯಲ್ಲಿನ ಪಾತ್ರೆ, ಪಗಡೆಗಳು ಬಿದ್ದಿವೆ. ತಿಕೋಟ ತಲೂಕಿನ ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಕಳ್ಳಕವಟಗಿ, ಘೋಣಸಗಿ, ಹುಬನೂರ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ.

- Advertisement -


ಗಡಿ ಭಾಗದ ಮಹಾರಾಷ್ಟ್ರದ ಮೊರಬಗಿ, ತಿಕ್ಕುಂಡಿ, ಆಸಂಗಿಯಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಜೋರು ಶಬ್ದಕ್ಕೆ ಜನರು ಮನೆಯಿಂದ ಹೊರಗಡೆ ಒಡೋಡಿ ಬಂದಿದ್ದಾರೆ.



Join Whatsapp