ಸುಳ್ಯ: ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದು ಮೂವರಿಗೆ ಗಾಯ

Prasthutha|

- Advertisement -

ಸುಳ್ಯ: ಅರಂತೋಡು ಸಮೀಪದ ಅರಮನೆಯ ಶಿಥಿಲಗೊಂಡ ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದ ಪರಿಣಾಮ ಮೂವರು ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಕುಸುಮಾಧರ ಉಳುವಾರು, ಚಂದ್ರಶೇಖರ ಕೊಂಪುಳಿ ಮತ್ತು ತೇಜಕುಮಾರ್ ಗಾಯಾಳುಗಳು.

- Advertisement -

ರಾತ್ರಿ ಮರ್ಕಂಜದಲ್ಲಿ ಕೆಲಸ ಮುಗಿಸಿ ತೂಗು ಸೇತುವೆಯ ಮೇಲೆ ಮೂವರು ಹೋಗುತ್ತಿದ್ದ ವೇಳೆ ರೋಪ್ ತುಂಡಾಗಿದೆ.

ಮೂವರನ್ನು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.



Join Whatsapp