ಕಾಶಿ ಮಸೀದಿಯ ಮೇಲೂ ಸಂಘಪರಿವಾರದ ಹಕ್ಕುಸ್ವಾಮ್ಯ | ಬಾಬರಿಯನ್ನು ಮರೆತುಬಿಡಬೇಕೆಂದು ಕರೆ ನೀಡಿದವರು ಈಗ ಮೌನವಾಗಿದ್ದಾರೆ: ಅನೀಸ್ ಅಹ್ಮದ್

Prasthutha|

ಹೊಸದಿಲ್ಲಿ: ಬಾಬರಿ ಮಸೀದಿಯ ನಂತರ ಇದೀಗ ಸಂಘಪರಿವಾರ ಕಾಶಿಯ ಗ್ಯಾನ್ ವಾಪಿ ಮಸೀದಿಯ ಮೇಲೂ ತಮ್ಮ ಹಕ್ಕು ಸ್ಥಾಪನೆಯೊಂದಿಗೆ ಬಂದಿರುವಾಗ ಮುಸ್ಲಿಂ ನಾಯಕರೆಂಬ ‘ಬೆದರು ಬೊಂಬೆ’ಗಳು ಮತ್ತು ಬಾಬರಿ ಮಸೀದಿಯನ್ನು ಮರೆತು ಬಿಡಬೇಕೆಂದು ಮುಸ್ಲಿಮರಿಗೆ ಕರೆ ನೀಡಿದ ಉದಾರವಾದಿಗಳು ಕಾಣೆಯಾಗಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದ್ದಾರೆ.

- Advertisement -

ಬಾಬರಿ ಮಸ್ಜಿದ್‌ ಗಾಗಿರುವ ಹೋರಾಟ ಕೇವಲ ಕಟ್ಟಡಕ್ಕೆ ಬೇಕಾಗಿರುವ ಹೋರಾಟವಲ್ಲ, ಬದಲಾಗಿ ಮುಸ್ಲಿಮರ ಧಾರ್ಮಿಕ ಹಕ್ಕುಗಳು ಮತ್ತು ಸುರಕ್ಷಿತ ಅಸ್ತಿತ್ವಕ್ಕಾಗಿರುವ ಹೋರಾಟವಾಗಿದೆ ಎಂದು ಅನೀಸ್ ಅಹ್ಮದ್ ಟ್ವೀಟ್ ಮಾಡಿದ್ದಾರೆ.

ಬಾಬರಿ ಮಸೀದಿ ಧ್ವಂಸದ ಬಗ್ಗೆ ಮುಸ್ಲಿಮರು ಮೌನವಾಗಿರಬೇಕು ಎಂದು ಅನೇಕರು ಕರೆ ನೀಡಿದ್ದರು. ಜಾತ್ಯತೀತ ಪಕ್ಷಗಳೂ ಕೂಡ ನ್ಯಾಯ ನಿರಾಕರಣೆಯ ವಿರುದ್ಧ ದೃಢವಾಗಿ ನಿಲ್ಲಲು ಸಿದ್ಧವಿರಲಿಲ್ಲ. ಈಗ ಸಂಘ ಪರಿವಾರ ಗ್ಯಾನ್‌ವಾಪಿ ಮಸ್ಜಿದ್‌ಗೆ ತಮ್ಮ ಹಕ್ಕುಗಳೊಂದಿಗೆ ಬಂದಿದ್ದಾರೆ ಎಂದು ಅನೀಸ್ ಅಹ್ಮದ್ ಹೇಳಿದ್ದಾರೆ. ಕಾಶಿ ವಿಶ್ವನಾಥ ದೇವಾಲಯ-ಗ್ಯಾನ್‌ವಾಪಿ ಮಸೀದಿಯ ಸಂಕೀರ್ಣವನ್ನು ಸಮೀಕ್ಷೆ ನಡೆಸಲು ಪುರಾತತ್ವ ಇಲಾಖೆಯ ಸರ್ವೇಗೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ.

- Advertisement -

ಗ್ಯಾನ್‌ವಾಪಿ ಮಸ್ಜಿದ್ ಇರುವ ಭೂಮಿಯನ್ನು ಹಿಂದೂಗಳಿಗೆ ನೀಡಬೇಕೆಂದು ಕೋರಿ ವಕೀಲ ವಿ.ಎಸ್.ರಾಸ್ತೋಗಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಸಮೀಕ್ಷೆಗೆ ಆದೇಶ ನೀಡಿತ್ತು. 2000 ವರ್ಷಗಳ ಹಿಂದೆ ವಿಕ್ರಮಾದಿತ್ಯ ಮಹಾರಾಜ ನಿರ್ಮಿಸಿದ ಕಾಶಿ ವಿಶ್ವನಾಥ ದೇವಾಲಯವನ್ನು ಮೊಘಲ್ ಆಳ್ವಿಕೆಯಲ್ಲಿ 1664 ರಲ್ಲಿ ಔರಂಗಜೇಬನು ವಶಪಡಿಸಿಕೊಂಡು ಗ್ಯಾನ್‌ವಾಪಿ ಮಸೀದಿಯನ್ನು ನಿರ್ಮಿಸಿದನು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.



Join Whatsapp