ಗಾಝಾದ ಆಸ್ಪತ್ರೆಗಳಲ್ಲಿ ಆಹಾರ ಮತ್ತು ಔಷಧದ ತೀವ್ರ ಕೊರತೆ

Prasthutha|

ಗಾಝಾ : ಉತ್ತರ ಗಾಝಾದ ಆಸ್ಪತ್ರೆಗಳಲ್ಲಿ ಆಹಾರ ಮತ್ತು ಔಷಧದ ತೀವ್ರ ಕೊರತೆ ಎದುರಾಗಿದ್ದು ವೈದ್ಯಕೀಯ ಸೇವೆಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.

- Advertisement -


2 ದಿನಗಳ ಹಿಂದೆ ಈ ಪ್ರದೇಶದಿಂದ ತಕ್ಷಣ ಹೊರಡುವಂತೆ ಇಸ್ರೇಲ್ ಸೇನೆ ನೀಡಿದ ಆದೇಶವನ್ನು ಪಾಲಿಸಲು ಮೂರೂ ಆಸ್ಪತ್ರೆಗಳ ವೈದ್ಯರು ನಿರಾಕರಿಸಿದ ಬಳಿಕ ಆಸ್ಪತ್ರೆಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ಇಸ್ರೇಲ್ ಪಡೆ ತಡೆಯೊಡ್ಡಿದೆ. ಆದ್ದರಿಂದ ಅಂತರಾಷ್ಟ್ರೀಯ ಸಮುದಾಯ, ರೆಡ್ಕ್ರಾಸ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳು ಈ ಪ್ರದೇಶದಲ್ಲಿ ಮಾನವೀಯ ಕಾರಿಡಾರ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಆಗ್ರಹಿಸಿದ್ದಾರೆ.



Join Whatsapp