ಬಾಬಾ ಸಿದ್ದೀಕಿ ಹತ್ಯೆ: ಯೂಟ್ಯೂಬ್ ನೋಡಿ ಶೂಟ್ ಮಾಡುವುದನ್ನು ಕಲಿತಿದ್ದ ಹಂತಕರು

Prasthutha|

ಬೆಂಗಳೂರು: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದೀಕಿ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಮುಂಬೈ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -


ಬಂಧಿತರಲ್ಲಿ ಇಬ್ಬರಾದ ಗುರ್ಮೈಲ್ ಬಲ್ಜಿತ್ ಸಿಂಗ್ ಹಾಗೂ ಧರ್ಮರಾಜ್ ಕಶ್ಯಪ್ ಅವರು ಗುಂಡು ಹಾರಿಸುವ ಕಲೆಯನ್ನು ಯೂಟ್ಯೂಬ್ ನೋಡಿ ಕಲಿತಿದ್ದರು ಎಂದು ತನಿಖಾಧಿಕಾರಿಗಳು ಹೇಳಿರುವುದಾಗಿ ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.


ಯೋಜನೆಗೂ ಮುನ್ನ ಈ ಇಬ್ಬರೂ ಯೂಟ್ಯೂಬ್ ವಿಡಿಯೊಗಳನ್ನು ನೋಡಿ ಗುಂಡು ಹಾರಿಸುವುದು, ಟಾರ್ಗೆಟ್ ಹತ್ಯೆ ಮಾಡುವುದನ್ನು ಕಲಿತಿದ್ದರು. ಬಳಿಕ ಯೋಜನೆ ರೂಪಿಸಿದವರು ಇವರಿಗೆ ಸಿದ್ದೀಕಿ ಮತ್ತು ಅವರ ಮಗನನ್ನು ಕೊಲ್ಲುವ ಹೊಣೆಯನ್ನು ನೀಡಿದ್ದರು ಎಂದು ತಿಳಿಸಿದ್ದಾರೆ.

- Advertisement -


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು ನಾಲ್ವರನ್ನು ಬಂಧಿಸಿದಂತಾಗಿದೆ. ಹರಿಯಾಣದ ನಿವಾಸಿ ಗುರ್ಮೈಲ್ ಬಲ್ಜಿತ್ ಸಿಂಗ್ (23), ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಮತ್ತು ಸಹ ಸಂಚುಕೋರ ಪುಣೆಯ ಪ್ರವೀಣ್ ಲೋಣಕರ್ (25) ಮತ್ತು ಉತ್ತರ ಪ್ರದೇಶದ ಬಹರಾಯಿಚ್ ಮೂಲದ ಹರೀಶ್ಕುಮಾರ್ ಬಾಲಕರಾಮ್ (23) ಬಂಧಿತರು.
ಮತ್ತೊಬ್ಬ ಶಂಕಿತ ಶೂಟರ್ ಶಿವಕುಮಾರ್ ಗೌತಮ್ ಮತ್ತು ಆರೋಪಿ ಮೊಹಮ್ಮದ್ ಜಿಶನ್ ಅಖ್ತರ್ಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.



Join Whatsapp