ಬಿಷ್ಣೋಯ್ ಗ್ಯಾಂಗ್ ಗೆ ಭಾರತದ ಸರ್ಕಾರಿ ಏಜೆಂಟ್ ಜೊತೆ ನಂಟಿದೆ: ಕೆನಡಾ ಪೊಲೀಸರ ಗಂಭೀರ ಆರೋಪ

Prasthutha|

ಒಟ್ಟೋವಾ: ಬಿಷ್ಣೋಯ್ ಗ್ಯಾಂಗ್ ಗೆ ಭಾರತೀಯ ಸರ್ಕಾರಿ ಏಜೆಂಟ್ ಜೊತೆ ಸಂಪರ್ಕ ಹೊಂದಿದೆ ಎಂದು ಕೆನಡಾದ ರಾಯಲ್ ಕೆನಡಾದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಗಂಭೀರ ಆರೋಪ ಮಾಡಿದ್ದಾರೆ.

- Advertisement -


ಆರ್ ಸಿಎಂಪಿ ಕಮಿಷನರ್ ಮೈಕ್ ಡುಹೆನೆ ಮತ್ತು ಅವರ ಡೆಪ್ಯೂಟಿ ಬ್ರಿಗಿಟ್ಟೆ ಗೌವಿನ್ ಈ ಆರೋಪ ಮಾಡಿದ್ದಾರೆ. ಕೆನಡಾದ ಪ್ರಜೆ ಮತ್ತು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜಾರ್ ಹತ್ಯೆಯಲ್ಲಿ ದೆಹಲಿಯ ಏಜೆಂಟ್ ಗಳು ಭಾಗಿಯಾಗಿದ್ದಾರೆ ಎಂದು ಕಳೆದ ವರ್ಷವೂ ಆರೋಪ ಮಾಡಲಾಗಿತ್ತು.


ಇದು (ಭಾರತ ಸರ್ಕಾರ) ದಕ್ಷಿಣ ಏಷ್ಯಾದ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ. ಆದರೆ ಅವರು ನಿರ್ದಿಷ್ಟವಾಗಿ ಕೆನಡಾದಲ್ಲಿ ಖಲಿಸ್ತಾನಿ ಪರ ಅಂಶಗಳನ್ನು ಗುರಿಯಾಗಿಸಿಕೊಂಡಿದ್ದಾರೆ. RCMP ದೃಷ್ಟಿಕೋನದಿಂದ ನಾವು ನೋಡಿದ್ದು, ಅವರು ಸಂಘಟಿತ ಅಪರಾಧ ಅಂಶಗಳನ್ನು ಬಳಸುತ್ತಾರೆ ಎಂದು ಸಹಾಯಕ ಕಮಿಷನರ್ ಗೌವಿನ್ ಆರೋಪ ಮಾಡಿದ್ದಾರೆ.



Join Whatsapp