ಬಾಬಾ ಸಿದ್ದೀಕಿ ಹಂತಕರನ್ನು ಗಲ್ಲಿಗೇರಿಸುತ್ತೇವೆ: ಮಹಾರಾಷ್ಟ್ರ ಮುಖ್ಯಮಂತ್ರಿ

Prasthutha|

ಮುಂಬೈ: ಮಾಜಿ ಸಚಿವ ಬಾಬಾ ಸಿದ್ದೀಕಿ (66) ಹತ್ಯೆ ಪ್ರಕರಣದ ಹಂತಕರನ್ನು ಗಲ್ಲಿಗೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪಂಜಾಬ್ ನ ಜಲಂಧರ್ ನ ನಿವಾಸಿ ಮೊಹಮ್ಮದ್ ಜಿಶನ್ ಅಖ್ತರ್ ಪತ್ತೆಗಾಗಿ ಭಾರಿ ಶೋಧ ನಡೆಸಲಾಗಿದೆ. ಇತನ ವಿರುದ್ಧ ಪಂಜಾಬ್ ಮತ್ತು ಹರಿಯಾಣದಲ್ಲಿ ಸುಮಾರು ಒಂಬತ್ತು ಪ್ರಕರಣಗಳು ದಾಖಲಾಗಿದ್ದವು. ಈ ಹತ್ಯೆಯ ಹಿಂದೆ ಆರು ಮಂದಿಯ ಪಾತ್ರ ಇರುವುದು ಬೆಳಕಿಗೆ ಬಂದಿದ್ದು, ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೇಯೇ ಇಲ್ಲ ಎಂದು ಹೇಳಿದ್ದಾರೆ.


ಪ್ರಕಣದಲ್ಲಿ ಪೊಲೀಸರು ಇಲ್ಲಿಯವರೆಗೆ ಹರಿಯಾಣದ ನಿವಾಸಿ ಗುರ್ಮೈಲ್ ಬಲ್ಜಿತ್ ಸಿಂಗ್ (23), ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಮತ್ತು ಪುಣೆಯ ಸಹ ಸಂಚುಕೋರ ಪ್ರವೀಣ್ ಲೋನ್ಕರ್ ಅವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬೇಕಾಗಿರುವ ಮೊಹಮ್ಮದ್ ಜಿಶನ್ ಅಖ್ತರ್ ಮತ್ತು ಗೌತಮ್ ಗಾಗಿ ಹುಡುಕಾಟ ನಡೆಸಿದ್ದಾರೆ.



Join Whatsapp