ಬಾಬಾ ಸಿದ್ದಿಕ್ ಹತ್ಯೆಗೆ ಗುಜರಾತ್ ನಂಟು ಇದೆ, ಅಮಿತ್ ಶಾ ರಾಜೀನಾಮೆ ನೀಡಲಿ: ಸಂಜಯ್ ರಾವತ್

Prasthutha|

ಮುಂಬೈ: ಸಂಸದ ಸಂಜಯ್ ರಾವತ್ ಎನ್ ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಗೂ ಗುಜರಾತ್ ಗೂ ನಂಟು ಇದೆ ಎಂದು ಹೇಳಿದ್ದು, ಕರಾವಳಿ ರಾಜ್ಯದಿಂದ ಭೂಗತ ಜಗತ್ತು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

- Advertisement -


ರಾಜ್ಯದ ಸಬರಮತಿ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅಪರಾಧದ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ ಎಂದ ರಾವತ್, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸವಾಲು ಹಾಕಿದ್ದಾರೆ.


ಅಮಿತ್ ಶಾ ಗುಜರಾತ್ ನವರು ಎಂದು ಸೂಚಿಸಿದ ಸಂಜಯ್ ರಾವತ್, ಹತ್ಯೆಯ ಹಿನ್ನೆಲೆಯಲ್ಲಿ ಎನ್ ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಬೇಕು ಎಂದಿದ್ದಾರೆ.

- Advertisement -


“ಈ ಸರ್ಕಾರದ ನಂತರ ಮುಂಬೈನಲ್ಲಿ ಗ್ಯಾಂಗ್ ವಾರ್ ಮತ್ತು ಭೂಗತ ಜಗತ್ತಿನ ಶಕ್ತಿ ಹೆಚ್ಚಾಗಬಹುದು ಎಂದು ನಾನು ಮೊದಲೇ ಹೇಳಿದ್ದೆ. ಈ ಸರ್ಕಾರಕ್ಕೂ ಭೂಗತ ಜಗತ್ತಿನ ಬೆಂಬಲವಿದ್ದು, ಆ ಭೂಗತ ಜಗತ್ತನ್ನು ಗುಜರಾತ್ ನಿಂದಲೇ ನಡೆಸಲಾಗುತ್ತಿದೆ. ಇಂದು ಗುಜರಾತ್ ನಲ್ಲಿ ₹5,000 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದರರ್ಥ ₹ 50,000 ಕೋಟಿ ಮೌಲ್ಯದ ಡ್ರಗ್ಸ್ ಈಗಾಗಲೇ ದೇಶದಲ್ಲಿ ಹಂಚಲಾಗಿದೆ. ಗುಜರಾತ್ ನ ಸಬರಮತಿ ಜೈಲಿನಲ್ಲಿರುವ ಮತ್ತು ಗುಜರಾತ್ ಎಟಿಎಸ್ ವಶದಲ್ಲಿರುವ ದರೋಡೆಕೋರನೊಬ್ಬ ಬಾಬಾ ಸಿದ್ದಿಕ್ ಹತ್ಯೆಯ ಹೊಣೆಯನ್ನು ಹೊರುತ್ತಾನೆ. ಗುಜರಾತ್ ಮೂಲದ ಕೇಂದ್ರ ಗೃಹ ಸಚಿವರಿಗೆ ಇದು ಸವಾಲಾಗಿದೆ. ಅಮಿತ್ ಶಾ ರಾಜೀನಾಮೆಗೆ ಅಜಿತ್ ಪವಾರ್ ಒತ್ತಾಯಿಸಬೇಕು ಎಂದು ಸಂಜಯ್ ರಾವತ್ ಹೇಳಿದ್ದಾರೆ.


ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ “ಸಿಂಗಮ್ ಗಿರಿ”ಯನ್ನು ತೋರಿಸಬೇಕು ಎಂದು ಅವರು ಹೇಳಿದರು.



Join Whatsapp