‘ಅಧಿಕಾರಕ್ಕೆ ಬಂದರೆ ಭಾರತದ ವಸ್ತುಗಳ ಮೇಲೆ ತೆರಿಗೆ’: ಮೋದಿ ‘ಮಿತ್ರ’ ಎನ್ನುತ್ತಲೇ ಎಚ್ಚರಿಕೆ ಕೊಟ್ಟ ಡೊನಾಲ್ಡ್ ಟ್ರಂಪ್

Prasthutha|

ವಾಷಿಂಗ್ಟನ್: ತಾವು ಅಧಿಕಾರಕ್ಕೆ ಮರಳಿದರೆ ಪರಸ್ಪರ ತೆರಿಗೆಯನ್ನು ಜಾರಿಗೊಳಿಸುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

- Advertisement -

ಎಲ್ಲ ಪ್ರಮುಖ ದೇಶಗಳ ನಡುವೆ ಭಾರತವು ವಿದೇಶಿ ಉತ್ಪನ್ನಗಳ ಮೇಲೆ ಅತ್ಯಧಿಕ ತೆರಿಗೆ ಟಾರಿಫ್ ವಿಧಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ಅಮೆರಿಕವನ್ನು ಮತ್ತೊಮ್ಮೆ ಅಸಾಧಾರಣ ಸಂಪತ್ತಿನ ರಾಷ್ಟ್ರವನ್ನಾಗಿ ಮಾಡುವ ನನ್ನ ಆಲೋಚನೆಯಲ್ಲಿ ಅತ್ಯಂತ ಪ್ರಮುಖವಾದ ಅಂಶವೆಂದರೆ ಬಹುಶಃ ಪ್ರತಿ ತೆರಿಗೆ. ಇದು ನನ್ನ ಯೋಜನೆಗಳಲ್ಲಿ ಬಹಳ ಮುಖ್ಯವಾದ ಪದ. ಏಕೆಂದರೆ ಸಾಮಾನ್ಯವಾಗಿ ನಾವು ಟಾರಿಫ್ ವಿಧಿಸುವುದಿಲ್ಲ. ನಾನು ವ್ಯಾನ್, ಸಣ್ಣ ಟ್ರಕ್‌ಗಳು ಇತ್ಯಾದಿಗಳ ಮೂಲಕ ಆ ಪ್ರಕ್ರಿಯೆಯನ್ನು ಆರಂಭಿಸಿದ್ದೆ. ನಾನು ನಿಜಕ್ಕೂ ತೆರಿಗೆ ಹಾಕುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ಭಾರತ ಅತಿ ದೊಡ್ಡ ತೆರಿಗೆ ವಿಧಿಸುತ್ತದೆ. ನಾವು ಭಾರತದ ಜತೆ ಅದ್ಭುತ ಸಂಬಂಧ ಹೊಂದಿದ್ದೇವೆ. ನಾನೂ ಹೊಂದಿದ್ದೆ. ಮುಖ್ಯವಾಗಿ ಅಲ್ಲಿನ ನಾಯಕ ಮೋದಿ (ಪ್ರಧಾನಿ ನರೇಂದ್ರ ಮೋದಿ). ಮಹಾನ್ ವ್ಯಕ್ತಿ. ನಿಜಕ್ಕೂ ಆತ ಮಹಾನ್ ವ್ಯಕ್ತಿ. ಅವರು ಇದನ್ನು ಜತೆಗೂಡಿಸಿದರು. ಅವರು ಅದ್ಭುತ ಕೆಲಸ ಮಾಡಿದ್ದಾರೆ. ಆದರೆ ಅವರು ವಿಪರೀತ ತೆರಿಗೆ ವಿಧಿಸುತ್ತಿದ್ದಾರೆ” ಎಂದು ಮೋದಿ ಅವರನ್ನು ಹೊಗಳುತ್ತಲೇ ಭಾರತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



Join Whatsapp