ಬಿಜೆಪಿಯ ಗಲಭೆಕೋರ ಶಾಸಕರ ಕೇಸುಗಳನ್ನು ಹಿಂಪಡೆದ ಕಾಂಗ್ರೆಸ್ ಸರ್ಕಾರ ಸಂಘಪಾರಿವಾರದ ಅನತಿಯ ಗೊಂಬೆ ಎಂದು ಸಾಬೀತಾಗಿದೆ: ರಿಯಾಝ್ ಕಡಂಬು

Prasthutha|

ಬೆಂಗಳೂರು: ಬಿಜೆಪಿಯ ಗಲಭೆಕೋರ ನಾಯಕರ ಮತ್ತು ಶಾಸಕರ ಕೇಸುಗಳನ್ನು ಹಿಂಪಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಸಂಘಪಾರಿವಾರದ ಅನತಿಯ ಗೊಂಬೆ ಎನ್ನುವುದನ್ನು ಸಾಬೀತು ಪಡಿಸಿದೆ ಎಂದು SDPI ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಕಿಡಿಕಾರಿದ್ದಾರೆ.

- Advertisement -

ಕೇಂದ್ರ ಸಚಿವ ಸೋಮಣ್ಣ ಸೇರಿದಂತೆ 43 ಕ್ರಿಮಿನಲ್ ಪ್ರಕರಣಗಳನ್ನು ಅಭಿಯೋಜನೆಯಿಂದ ವಾಪಸ್ ಪಡೆಯಲು ಸಚಿವ ಸಂಪುಟ ನಿನ್ನೆ ತೀರ್ಮಾನ ಮಾಡಿತ್ತು.

ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಮಾಡಿರುವ ರಿಯಾಝ್ ಕಡಂಬು, DJ ಹಳ್ಳಿ KJ ಹಳ್ಳಿ ಸಂಘರ್ಷ ಪ್ರಕರಣದಲ್ಲಿ ಅಮಾಯಕರ ಮೇಲಿರುವ ಕೇಸುಗಳನ್ನು ಹಿಂಪಡೆಯಲು ಮನಸ್ಸು ತೋರಿಸದ ರಾಜ್ಯ ಸಿದ್ದರಾಮಯ್ಯ ಸರ್ಕಾರ ಬಿಜೆಪಿಯ ಗಲಭೆಕೋರ ನಾಯಕರ ಶಾಸಕರ ಕೇಸುಗಳನ್ನು ಹಿಂಪಡೆದು ನಾನು ಸಂಘಪಾರಿವಾರದ ಅನತಿಯ ಗೊಂಬೆ ಎನ್ನುವುದನ್ನು ಸಾಬೀತು ಪಡಿಸಿದೆ. ಈ ಸರ್ಕಾರವನ್ನಾಗಿದೆ ಮುಸ್ಲಿಮರು ಅತ್ಯಧಿಕ ಮತ ನೀಡಿ ಅಧಿಕಾರಕ್ಕೇರಿಸಿದ್ದು.

- Advertisement -

ನಿರಂತರ ಮುಸ್ಲಿಮ್ ದ್ವೇಷ ಹರಡುವ ಯತ್ನಾಳ್ ಸಿಟಿ ರವಿ ಯಂತಹ ಕೋಮುಕ್ರಿಮಿ ಬಿಜೆಪಿ ಮಾಜಿ ಮಂತ್ರಿ ಮಹಾಶಯರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬಂಧಿಸಬಹುದು ಎಂದು ಅಂದುಕೊಂಡರೇ ಅವರಿಗೆ ಕೃಪಕಟಾಕ್ಷೆ ಕೊಟ್ಟು ಗುಲಾಮತ್ವದ ಆಡಳಿತವನ್ನು ಮುಂದುವರಿಸುತ್ತಿದೆ. ಇದರಿಂದ ತನ್ನ ಭ್ರಷ್ಟ ಅಧಿಕಾರದ ಕುರ್ಚಿಯನ್ನು ಉಳಿಸಿಕೊಳ್ಳ ಬಹುದು ಎಂಬ ಭಾವನೆ ಕಾಂಗ್ರೆಸ್ ಸರ್ಕಾರಕ್ಕೇ ಇದ್ದಂತಿದೆ. ಕೋಲಾರದಲ್ಲಿ ಬಂದು ಭಾಷಣ ಬಿಗಿದ ರಾಹುಲ್ ಗಾಂಧಿಯನ್ನು ರಾಜ್ಯದ ಜಿಲ್ಲೆಯೊಂದರ ಕೋರ್ಟ್ ಮೆಟ್ಟಿಲಿಗೆ ಬರುವಂತೆ ಪ್ರಕರಣ ದಾಖಲಿಸಿದ ಅಂದಿನ ಬಿಜೆಪಿ ನಾಯಕರಿಗೇ ಬುದ್ದಿ ಕಲಿಸಬೇಕಾದ ಕಾಂಗ್ರೆಸ್ ಸರ್ಕಾರ ಅವರ ಪಾದಸೇವೆಗೆ ಇಳಿದಿರುವುದು ನಿಜಕ್ಕೂ ದುರಂತ ಎಂದು ಬರೆದುಕೊಂಡಿದ್ದಾರೆ.



Join Whatsapp