2028ಕ್ಕೆ ಮುಖ್ಯಮಂತ್ರಿಯಾಗುವ ಬಯಕೆ ಇದೆ: ಸತೀಶ್ ಜಾರಕಿಹೊಳಿ

Prasthutha|

ಹಾಸನ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ವಿಪಕ್ಷಗಳು ವ್ಯಾಪಕ ಹೋರಾಟ ಮಾಡುತ್ತಿರುವಂತೆಯೇ ಇತ್ತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ‘ಮುಖ್ಯಮಂತ್ರಿಯಾಗುವ ಬಯಕೆ ಇದೆ’ ಎಂದು ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ‘ಮುಖ್ಯಮಂತ್ರಿ ಸಿದ್ಧರಾಮಯ್ಯ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ. ಅವರ ಬದಲಾವಣೆ ಊಹಾಪೋಹಾ.. ಅಷ್ಟೇ ಆದರೆ ನಾನು 2028ಕ್ಕೆ ಮುಖ್ಯಮಂತ್ರಿಯಾಗುವ ಬಯಕೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

ನನ್ನ ಹಲವು ಹಿತೈಷಿಗಳು ನಾನೇ ಮುಂದಿನ ಸಿಎಂ ಎಂದು ಹೇಳಿದ್ದಾರೆ. ಆ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲ್ಲ. ನಾನು ಸಿಎಂ ಆಗುವುದು ಸಿದ್ಧರಾಮಯ್ಯ ಅವರ ಅವಧಿ ಮುಗಿದ ನಂತರವೇ. ಅದು ಸಿದ್ಧರಾಮಯ್ಯನವರ ಸಹಕಾರದಿಂದಲೇ ಸಿಎಂ ಆಗುತ್ತೇನೆ. ಇದೇ ಅಭಿಪ್ರಾಯವನ್ನು ನನ್ನ ಮಗಳು ಸಂಸದೆ ಪ್ರಿಯಾಂಕ ಜಾರಕಿಹೊಳಿ ಸಹ ವ್ಯಕ್ತಪಡಿಸಿದ್ದಾರೆ. 2028ರವರೆಗೂ ಕಾಯೋಣ ಎಂದು ಸತೀಶ್ ಜಾರಕಿಹೊಳಿ ಹೇಳಿದರು.



Join Whatsapp