ಚಿತ್ರದುರ್ಗ: ಜಾತಿ ಗಣತಿ ವಿಷಯ ಮುನ್ನಲೆಗೆ ಬಂದಿದ್ದು ನೋಡಿದರೆ ಸಿದ್ದರಾಮಯ್ಯ ಅವರಿಗೆ ಸಂಕಟ ಬಂದಾಗ ಈ ಜಾತಿ ಮುಂದೆ ತರುತ್ತಾರೆ ಎಂದು ಎಂಎಲ್ ಸಿ ಸಿ.ಟಿ ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಹಗರಣ, ಮುಡಾ ಹಗರಣ ಸರ್ಕಾರ ಜರ್ಜರಿತವಾಗಿದೆ. ಸರ್ಕಾರ ಭ್ರಷ್ಟ ಸರ್ಕಾರ ಇಮೇಜ್ ಅಂಟಿಸಿಕೊಂಡಿದೆ. ಜಾತಿ ಗಣತಿ ಮುನ್ನಲೆಗೆ ತಂದು ಮರೆ ಮಾಚುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಮತ್ತು ಆರ್ಎಸ್ಎಸ್ ಮೀಸಲಾತಿ ವಿರೋಧಿ ಎಂದು ಹೇಳುತ್ತಾರೆ. ಎಸ್ ಸಿ & ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ. ಬಡ್ತಿ ಮೀಸಲಾತಿ ಪರವಾಗಿ ನಿಂತು ಸುಪ್ರೀಂ ಕೋರ್ಟ್ ಗೆ ಅಫಡೆವಿಟ್ ಕೊಟ್ಟಿದ್ದು ಬಿಜೆಪಿ. ಪ್ರಾಮಾಣಿಕ ಬದ್ದತೆ ಬಿಜೆಪಿ ಪಕ್ಷಕ್ಕೆ ಇದೆ. ಹಿಂದುಳಿದ ಆಯೋಗಕ್ಕೆ ಸಂವಿಧಾನ ಬದ್ದತೆ ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದರು.