ಭಾರತೀಯ ರೈಲ್ವೆ ಇಲಾಖೆಯು ಈ ವರ್ಷ ಈಗಾಗಲೇ 50,000 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಹೊರಡಿಸಿದೆ. ಅವುಗಳ ಪೈಕಿ ಈಗ ಅಸಿಸ್ಟಂಟ್ ಲೋಕೋ ಪೈಲಟ್, ಆರ್ ಪಿಎಫ್ ಸಬ್ ಇನ್ಸ್ ಪೆಕ್ಟರ್ , ರೈಲ್ವೆ ಜೆಇ, ಸೂಪರಿಂಟೆಂಡಂಟ್, ಅಸಿಸ್ಟಂಟ್, ಸೂಪರ್ವೈಸರ್, ಟೆಕ್ನೀಷಿಯನ್ ಹುದ್ದೆಗಳಿಗೆ ಪರೀಕ್ಷೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ.
ನೇಮಕಾತಿ ಪ್ರಾಧಿಕಾರ : ಭಾರತೀಯ ರೈಲ್ವೆ ಇಲಾಖೆ
• ಹುದ್ದೆ ಹೆಸರು : ಅಸಿಸ್ಟಂಟ್ ಲೋಕೋ ಪೈಲಟ್
• ಹುದ್ದೆಗಳ ಸಂಖ್ಯೆ : 5696
• ಪೇ ಲೆವೆಲ್ : 7ನೇ ವೇತನ ಆಯೋಗದ ಪ್ರಕಾರ ಲೆವೆಲ್ 2 ಸಂಭಾವನೆ.
• ಬೇಸಿಕ್ ಪೇ: ರೂ.19900.
• ಅಧಿಸೂಚನೆ ಸಂಖ್ಯೆ : CEN 01/2024
• ಸಂಭಾವ್ಯ ಪರೀಕ್ಷೆ ದಿನಾಂಕಗಳು : 25-11-2024 To 29-11-2024 (ಸಿಬಿಟಿ-1 )
ನೇಮಕಾತಿ ಪ್ರಾಧಿಕಾರ : ಭಾರತೀಯ ರೈಲ್ವೆ ಇಲಾಖೆ
• ಹುದ್ದೆ ಹೆಸರು : ಆರ್ ಪಿಎಫ್ ಸಬ್ ಇನ್ಸ್ ಪೆಕ್ಟರ್
• ಹುದ್ದೆಗಳ ಸಂಖ್ಯೆ : 452
• ಆರ್ಪಿಎಫ್ ಸಬ್ಇನ್ಸ್ಪೆಕ್ಟರ್ ಆರಂಭಿಕ ವೇತನ: ರೂ.35,400.
• ಅಧಿಸೂಚನೆ ದಿನಾಂಕ: CEN 01 RPF/2024
• ಸಂಭಾವ್ಯ ಪರೀಕ್ಷೆ ದಿನಾಂಕಗಳು : 02-12-2024 To 05-12-2024
ನೇಮಕಾತಿ ಪ್ರಾಧಿಕಾರ : ಭಾರತೀಯ ರೈಲ್ವೆ ಇಲಾಖೆ
• ಹುದ್ದೆ ಹೆಸರು : ಟೆಕ್ನೀಷಿಯನ್ ಹುದ್ದೆಗಳು
• ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್ : 1092
• ಟೆಕ್ನೀಷಿಯನ್ ಗ್ರೇಡ್ -3 : 8052
• ಹೊಸದಾಗಿ ಸೇರ್ಪಡೆಯಾದ ಹುದ್ದೆಗಳು: 5154
• ಒಟ್ಟು ಹುದ್ದೆಗಳ ವಿವರ : 14298
• ಅಧಿಸೂಚನೆ ಸಂಖ್ಯೆ : CEN 02/2024
• ಸಂಭಾವ್ಯ ಪರೀಕ್ಷೆ ದಿನಾಂಕಗಳು: 16-12-2024 To 26-12-2024
ನೇಮಕಾತಿ ಪ್ರಾಧಿಕಾರ: ಭಾರತೀಯ ರೈಲ್ವೆ ಇಲಾಖೆ
• ಹುದ್ದೆಗಳ ಹೆಸರು: ರೈಲ್ವೆ ಜೆಇ, ಸೂಪರಿಂಟೆಂಡಂಟ್, ಅಸಿಸ್ಟಂಟ್, ಸೂಪರ್ವೈಸರ್.
• ಒಟ್ಟು ಹುದ್ದೆಗಳ ಸಂಖ್ಯೆ: 7951
• ಅಧಿಸೂಚನೆ ಸಂಖ್ಯೆ : CEN 03/2024
• ಸಂಭಾವ್ಯ ಪರೀಕ್ಷೆ ದಿನಾಂಕಗಳು: 06-12-2024 To 13-12-2024 (ಸಿಬಿಟಿ-1 )
ಈ ಹುದ್ದೆಗಳಿಗೆ 4 ಹಂತದ ಪರೀಕ್ಷೆಗಳು ಇರುತ್ತವೆ. ಅವುಗಳೆಂದರೆ..
- ಸ್ಟೇಜ್-I ಕಂಪ್ಯೂಟರ್ ಆಧಾರಿತ ಪರೀಕ್ಷೆ.
- ಸ್ಟೇಜ್-2 ಕಂಪ್ಯೂಟರ್ ಆಧಾರಿತ ಪರೀಕ್ಷೆ.
- ಮೂಲ ದಾಖಲೆಗಳ ಪರಿಶೀಲನೆ.
- ವೈದ್ಯಕೀಯ ಪರೀಕ್ಷೆ.