ರತನ್ ಟಾಟಾ ನಿಧನ: ಟಾಟಾ ಸಮೂಹದ ಭವಿಷ್ಯದ ನಾಯಕರು ಯಾರು ಗೊತ್ತಾ?

Prasthutha|

ಮುಂಬೈ: ಉದ್ಯಮಿ ರತನ್ ಟಾಟಾ ಅವರು ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ.

- Advertisement -


ರತನ್ ಟಾಟಾ ಅವರು 28 ಡಿಸೆಂಬರ್ 1937 ರಂದು ಸೂರತ್ ನಲ್ಲಿ ಜನಿಸಿದರು. ವ್ಯಕ್ತಿತ್ವದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಸ್ಥಾಪಿಸಿಕೊಂಡು ಉನ್ನತ ಶಿಖರಗಳನ್ನು ಏರಿದರು. ಅವರು ಟಾಟಾ ಗ್ರೂಪ್ ಆಫ್ ಬಿಸಿನೆಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದರು.


ರತನ್ ಅವರಿಗೆ ಸಹೋದರ ಜಿಮ್ಮಿ ಟಾಟಾ ಮತ್ತು ಮಲ ಸಹೋದರ ನೋಯೆಲ್ ಟಾಟಾ (ನವಲ್ ಅವರ ಎರಡನೇ ಪತ್ನಿ ಸಿಮೋನ್ ಅವರ ಮಗ) ಇದ್ದಾರೆ.
ಜಿಮ್ಮಿ ಅವರು ಟಾಟಾ ಗ್ರೂಪ್ ನಲ್ಲಿ ಗಮನಾರ್ಹ ಪ್ರಮಾಣದ ಪಾಲನ್ನು ಹೊಂದಿದ್ದರೂ, ಕುಟುಂಬದ ವ್ಯವಹಾರದಲ್ಲಿ ಅಷ್ಟೇನೂ ಆಸಕ್ತಿ ತೋರಿಲ್ಲ. ಹೀಗಾಗಿ, ಟಾಟಾ ಸಮೂಹವನ್ನು ಮುನ್ನಡೆಸುವ ಹೊಣೆ ನೋಯೆಲ್ ಅವರ ಮಕ್ಕಳ ಮುಂದಿದೆ.

- Advertisement -


ಈಗಾಗಲೇ ಟಾಟಾ ಸಮೂಹದಲ್ಲಿ ಗುರುತಿಸಿಕೊಂಡಿರುವ ಇವರು, ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸುವತ್ತ ಹೆಜ್ಜೆ ಇಟ್ಟಿದ್ದಾರೆ.


ನೋಯೆಲ್ ನವಲ್ ಟಾಟಾ ಅವರ ಮಕ್ಕಳಲ್ಲಿ ದೊಡ್ಡವರಾದ ಲೇಹ್ ಟಾಟಾ, ಸ್ಪೇನ್ನ ಮ್ಯಾಡ್ರಿಡ್ನಲ್ಲಿರುವ ‘ಐಇ ಬಿಸಿನೆಸ್ ಸ್ಕೂಲ್’ನಲ್ಲಿ ಮಾರ್ಕೆಟಿಂಗ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ‘ತಾಜ್ ಹೋಟೆಲ್ಸ್ ರೆಸಾರ್ಟ್ಸ್ ಅಂಡ್ ಪ್ಯಾಲೆಸ್’ನ ಸಹಾಯಕ ಮಾರಾಟ ವ್ಯವಸ್ಥಾಪಕರಾಗಿ 2006ರಲ್ಲಿ ಟಾಟಾ ಸಮೂಹ ಸೇರಿದ ಅವರು, ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಇದೀಗ ‘ದಿ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್’ (ಐಎಚ್ಸಿಎಲ್) ಉಪಾಧ್ಯಕ್ಷರಾಗಿದ್ದಾರೆ.


ಕಿರಿಯ ಪುತ್ರಿ ಮಾಯಾ ಅವರು ಟಾಟಾ ಸಮೂಹದ ಪ್ರಮುಖ ಹಣಕಾಸು ಸೇವಾ ಕಂಪನಿ ಟಾಟಾ ಕ್ಯಾಪಿಟಲ್ಸ್ ನಲ್ಲಿ ವಿಶ್ಲೇಷಕರಾಗಿ ವೃತ್ತಿ ಆರಂಭಿಸಿದ್ದಾರೆ. ಪುತ್ರ ನೆವಿಲ್ಲೆ, ಟಾಟಾ ಮೂಹದ ರೀಟೆಲ್ ವ್ಯವಹಾರದ ಕಂಪನಿ ‘ಟ್ರೆಂಟ್’ನಲ್ಲಿ ತೊಡಗಿಸಿಕೊಂಡಿದ್ದಾರೆ.



Join Whatsapp