ಜರ್ಮನಿ: ಕರ್ನಾಟಕ ವಿಧಾನಸಭೆಗೆ ಜರ್ಮನಿ ಪಾರ್ಲಿಮೆಂಟ್ ನಿಯೋಗವು 2025 ಫೆಬ್ರವರಿಯಲ್ಲಿ ಭೇಟಿ ನೀಡಲಿದೆ ಎಂದು ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ಬುಧವಾರ ತಿಳಿಸಿದ್ದಾರೆ.
ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್ ಅಧ್ಯಕ್ಷ ಐಲ್ಸ್ ಏಗ್ನರ್ ಅವರು ಜರ್ಮನಿ ಪ್ರವಾಸದಲ್ಲಿರುವ ಕರ್ನಾಟಕ ಸ್ಪೀಕರ್ ಅವರ ನಿಯೋಗದ ಜೊತೆಗೆ ಚರ್ಚಿಸಿ ಭಾರತದ ಪ್ರಜಾಪ್ರಭುತ್ವ, ಭೌಗೋಳಿಕ ಹಾಗೂ ಸಂಸದೀಯ ಇತಿಹಾಸದ ಕುರಿತು ಮಾಹಿತಿ ಪಡೆದರು.
ಈ ಸಂದರ್ಭ ನಿಯೋಗಕ್ಕೆ ಅವರು ಸೌಹಾರ್ದ ಔತಣಕೂಟ ಏರ್ಪಡಿಸಿದರು. ನಿಯೋಗವು ಜರ್ಮನಿ ಪ್ರತಿನಿಧಿಗಳನ್ನು ರಾಜ್ಯಕ್ಕೆ ಆಹ್ವಾನಿಸಿತು. ಯು.ಟಿ.ಖಾದರ್ ಅವರ ಜೊತೆಗೆ ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಉಮಾನಾಥ ಕೋಟ್ಯಾನ್, ಅಶೋಕ್ ಕುಮಾರ್ ರೈ, ಮಹಾಂತೇಶ ಕೌಜಲಗಿ ಇದ್ದರು.