ಸಿರಿಯಾದ ವಸತಿ ಕಟ್ಟಡದ ಮೇಲೆ ಇಸ್ರೇಲ್ ರಾಕೆಟ್ ದಾಳಿ: 7 ಮಂದಿ ಮೃತ್ಯು

Prasthutha|

ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿರುವ ಕಟ್ಟಡದ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದ್ದು, ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ ಎಂದು ಸಿರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಮಾಹಿತಿಯನ್ನು ನೀಡಿದೆ.

- Advertisement -


ಈ ಕಟ್ಟಡಕ್ಕೆ ಇರಾನ್ ನ ರೆವಲ್ಯೂಷನರಿ ಗಾರ್ಡ್ ಮತ್ತು ಹಿಜ್ಬುಲ್ಲಾ ನಾಯಕರು ಆಗಾಗ ಭೇಟಿ ನೀಡುತ್ತಿರುತ್ತಿದ್ದರು. ಇಸ್ರೇಲ್ ಡಮಾಸ್ಕಸ್ ನ ಪಶ್ಚಿಮದಲ್ಲಿರುವ ಮೆಜಾಹ್ ಉಪನಗರದಲ್ಲಿರುವ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡಿದೆ. ಈ ದಾಳಿಯನ್ನು ಇಸ್ರೇಲ್ ನಡೆಸಿದೆ. ವರದಿಯ ಪ್ರಕಾರ, ಇಸ್ರೇಲ್ ನಿಂದ ಮೂರು ರಾಕೆಟ್ ಗಳನ್ನು ಹಾರಿಸಲಾಯಿತು.


ಅನೇಕ ಇಸ್ರೇಲಿ ಕ್ಷಿಪಣಿಗಳನ್ನು ಸಿರಿಯನ್ ರಕ್ಷಣಾ ವ್ಯವಸ್ಥೆಯು ತಡೆದಿದೆ.



Join Whatsapp