ನಿಮ್ಮ ಪ್ರೀತಿ ಹಾಗೂ ನಂಬಿಕೆಯನ್ನು ಕಾಪಾಡಿಕೊಳ್ಳುತ್ತೇನೆ: ವಿನೇಶ್ ಫೋಗಟ್

Prasthutha|

ಹರಿಯಾಣದ ಜುಲಾನಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ 6,015 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

- Advertisement -

ಇದು ಸತ್ಯದ ಗೆಲುವು ನಿಮ್ಮ ಪ್ರೀತಿ ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳುತ್ತೇನೆ ಎಂದು ಗೆದ್ದ ನಂತರ ವಿನೇಶ್ ಫೋಗಟ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದು, “ಇದು ಸತ್ಯದ ಗೆಲುವು” ಎಂದು ಗೆದ್ದ ನಂತರ ಫೋಗಟ್ ಹೇಳಿದರು. ಕಾಂಗ್ರೆಸ್ ಸೋಲಿನ ಬಗ್ಗೆ ಕೇಳಿದಾಗ, “ಇನ್ನೂ ಸ್ವಲ್ಪ ಸಮಯ ಕಾಯೋಣ. ಎಣಿಕೆ ಇನ್ನೂ ನಡೆಯುತ್ತಿದೆ” ಎಂದು ಹೇಳಿದ್ದಾರೆ.

- Advertisement -

ಮುಂದುವರೆದು, ಇದು ಎಲ್ಲಾ ಯುವತಿಯರ ಗೆಲುವು. ಹೋರಾಟಕ್ಕೆ ನಿರ್ಧರಿಸಿದ ಎಲ್ಲಾ ಮಹಿಳೆಯರ ಗೆಲುವು. ಈ ದೇಶ ಕೊಟ್ಟ ಪ್ರೀತಿ ಹಾಗೂ ನಂಬಿಕೆಯನ್ನು ಉಳಿಸುತ್ತೇನೆ. ನಾನು ಹರಿಯಾಣದ ಜನರಿಗಾಗಿ ಕೆಲಸ ಮಾಡುತ್ತೇನೆ. ಜೂಲಾನಾ ಜನರು ನನಗೆ ತಮ್ಮ ಆಶೀರ್ವಾದವನ್ನು ನೀಡಿದ್ದಾರೆ ಎಂದಿದ್ದಾರೆ.



Join Whatsapp