ಮೈಕ್ರೊಆರ್ ಎನ್ ಎ ಆವಿಷ್ಕಾರ: ಅಮೆರಿಕದ ವಿಕ್ಟರ್, ಗ್ಯಾರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

Prasthutha|

ಸ್ಟಾಕ್ಹೋಮ್: ಮೈಕ್ರೋ ಆರ್ ಎನ್ ಎ ಆವಿಷ್ಕಾರಗೊಳಿಸಿದ ಅಮೆರಿಕದ ವಿಕ್ಟರ್ ಆ್ಯಂಬ್ರೋಸ್ ಮತ್ತು ಗ್ಯಾರಿ ರುಕುನ್ ಅವರಿಗೆ 2024ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಸಂದಿದೆ.

- Advertisement -


ಜೀವಿಗಳ ಬೆಳವಣಿಗೆ ಹಾಗೂ ಕಾರ್ಯಚಟುವಟಿಕೆಗಳಲ್ಲಿ ಜೀನ್ಗಳ ಪಾತ್ರ ಕುರಿತು ಮೂಲ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಈ ಜೋಡಿ ಕಂಡುಹಿಡಿದ ಮೈಕ್ರೋ ಆರ್ ಎನ್ ಎ ಗೆ ಈ ಪ್ರಶಸ್ತಿ ಲಭಿಸಿದೆ.
ಈ ವಾರ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ನೊಬೆಲ್ ಪ್ರಶಸ್ತಿಗಳ ಘೋಷಣೆಯಾಗಲಿದೆ. ನಾಳೆ ಭೌತವಿಜ್ಞಾನ, ಬುಧವಾರ ರಸಾಯನ ವಿಜ್ಞಾನ, ಗುರುವಾರ ಸಾಹಿತ್ಯ ಕ್ಷೇತ್ರ ಮತ್ತು ಶುಕ್ರವಾರ ಶಾಂತಿ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆಯಾಗಲಿದೆ.


ಮೈಕ್ರೋಆರ್ ಎನ್ ಎ ಜೀನ್ ಗಳು 500 ಮಿಲಿಯನ್ ವರ್ಷಗಳ ಕಾಲ ಬಹುಕೋಶೀಯ ಜೀವಿಗಳ ಜೀನೋಮ್ಗಳಲ್ಲಿ ವಿಕಸನಗೊಂಡಿವೆ ಮತ್ತು ವಿಸ್ತಾರಗೊಂಡಿವೆ. ಮಾನವರಲ್ಲಿ ಕಂಡುಬರುವ ವಿಭಿನ್ನ ಮೈಕ್ರೋಆರ್ ಎನ್ ಎಗಳ ಸಾವಿರಕ್ಕೂ ಹೆಚ್ಚು ಜೀನ್ ಗಳಿವೆ ಮತ್ತು ಇವೆಲ್ಲವೂ ಮೈಕ್ರೋಆರ್ ಎನ್ ಎ ಯ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ ಎನ್ನುವುದು ಈ ಆವಿಷ್ಕಾರದಿಂದ ತಿಳಿದುಬಂದಿದೆ ಎಂದು ನೊಬೆಲ್ ಸಮಿತಿ ಹೇಳಿದೆ.



Join Whatsapp