ಮುಮ್ತಾಝ್ ಅಲಿ ನಿಗೂಢ ಸಾವು: ಮಾಜಿ ಶಾಸಕ ಮೊಯಿದ್ದೀನ್ ಬಾವ ಹೇಳಿದ್ದೇನು ?

Prasthutha|

ಮಂಗಳೂರು: ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯಿದ್ದೀನ್ ಬಾವ ಸೋದರ, ಉದ್ಯಮಿ ಮುಮ್ತಾಜ್ ಆಲಿ ಮೃತದೇಹ ಪತ್ತೆಯಾಗಿದೆ.

- Advertisement -


ಇದೇ ವೇಳೆ, ಸೋದರನನ್ನು ನೆನೆದು ಮಾಜಿ ಶಾಸಕ ಮೊಯಿದ್ದೀನ್ ಬಾವ ಕಣ್ಣೀರು ಹಾಕಿದ್ದು, ಬ್ಲಾಕ್ ಮೇಲ್ ನಿಂದಲೇ ನನ್ನ ಸಹೋದರ ಈ ನಿರ್ಧಾರಕ್ಕೆ ಬಂದಿದ್ದಾನೆ. ನನ್ನ ಸಹೋದರ ಶೈಕ್ಷಣಿಕವಾಗಿ, ಧಾರ್ಮಿಕ ಕಾರ್ಯಗಳಿಂದ ಹೆಸರು ಗಳಿಸಿದ್ದ. ಆತನ ಪ್ರಚಾರವನ್ನು ಸಹಿಸದ ಕೆಲವು ಶಕ್ತಿಗಳು ಕುತಂತ್ರ ಮಾಡಿದ್ದಾರೆ ಎಂದಿದ್ದಾರೆ.


ಈ ಕಾರಣದಿಂದಲೇ ನನ್ನ ಸಹೋದರ ಈ ನಿರ್ಧಾರಕ್ಕೆ ಬಂದಿದ್ದಾನೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನನ್ನ ಸಹೋದರನ ಈ ಸ್ಥಿತಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು. ರಾಜಕೀಯ ರಹಿತವಾಗಿ ಕೆಲಸ ಮಾಡಿದ್ದ ವ್ಯಕ್ತಿಯಾಗಿದ್ದ ಎಂದು ಹೇಳಿದ್ದಾರೆ.

- Advertisement -

ಮುಮ್ತಾಜ್ ಅಲಿ ಯವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ನೇರವಾಗಿ ಕೃಷ್ಣಾಪುರದ ಬ್ಲಾಕ್ ‌ನಂಬರ್ 8 ರಲ್ಲಿರುವ (ಚೊಕ್ಕಬೆಟ್ಟು) ತರವಾಡು ಮನೆಗೆ (ಶೌಕತ್ ಮಂಜಿಲ್) ಸಂಜೆ ಮೂರು ಗಂಟೆಗೆ ತರಲಾಗುವುದು. ಅಲ್ಲಿ ಬಂಧು ಬಳಗ, ಸ್ನೇಹಿತರು ಮತ್ತು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸಂಜೆ 4 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗುವುದು. ಅಲ್ಲಿಂದ ನೇರವಾಗಿ ಕೃಷ್ಣಾಪುರ 7 ನೇ ಬ್ಲಾಕ್ ನ ಈದ್ಗಾ ಮಸೀದಿ (ಅಲ್ ಮದ್ರಸತುಲ್ ಬದ್ರಿಯಾ) ಯಲ್ಲಿ ಜನಾಝಾ ನಮಾಜ್ ಗೆ ವ್ಯವಸ್ಥೆ ಮಾಡಲಾಗಿದೆ. ಮಗ್ರಿಬ್ ನಮಾಜ್ ಗೆ ಮೊದಲೇ ಮಯ್ಯತ್ ಅನ್ನು ದಫನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.


ಈ ನಡುವೆ ಸುರತ್ಕಲ್ ಬಳಿಯ ಕಾಟಿಪಳ್ಳ ನಿವಾಸಿ ಮಹಿಳೆ ಸೇರಿದಂತೆ ಆರು ಮಂದಿಯ ವಿರುದ್ಧ ಮುಮ್ತಾಜ್ ಆಲಿ ಸೋದರ ಹೈದರ್ ಅಲಿ ದೂರು ನೀಡಿದ್ದಾರೆ.


ಮುಮ್ತಾಜ್ ಆಲಿ ಅವರನ್ನು ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಬೇಡಿಕೆ ಇಟ್ಟಿದ್ದಾಗಿ ಆರೋಪ ಕೇಳಿಬಂದಿದೆ. ಕಾಟಿಪಳ್ಳ ನಿವಾಸಿ ರೆಹಮತ್, ಸುರತ್ಕಲ್ ಆಸುಪಾಸಿನ ನಿವಾಸಿಗಳಾದ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶುಐಬ್, ಸತ್ತಾರ್ ಅವರ ಕಾರು ಚಾಲಕ ಸಿರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.



Join Whatsapp