ಭಾರತದ ಭದ್ರತೆಗೆ ಧಕ್ಕೆ ತರುವ ಕೆಲಸವನ್ನು ನಾವು ಮಾಡುವುದಿಲ್ಲ: ಮಾಲ್ಡೀವ್ಸ್ ಅಧ್ಯಕ್ಷ

Prasthutha|

ನವದೆಹಲಿ: ಭಾರತದ ಭದ್ರತೆಗೆ ಧಕ್ಕೆ ತರುವ ಕೆಲಸವನ್ನು ನಾವು ಎಂದೂ ಮಾಡುವುದಿಲ್ಲ’ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಹೇಳಿದ್ದಾರೆ.

- Advertisement -


ನಾಲ್ಕು ದಿನಗಳ ಪ್ರವಾಸಕ್ಕಾಗಿ ನವದೆಹಲಿಗೆ ಆಗಮಿಸಿದ ಮಾಲ್ಡೀವ್ಸ್ ಅಧ್ಯಕ್ಷ, ಭಾರತದ ಭದ್ರತೆಯನ್ನು ಹಾಳುಮಾಡುವ ಯಾವುದನ್ನೂ ತಮ್ಮ ದೇಶ ಎಂದಿಗೂ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.


ಭಾರತ ಮತ್ತು ಮಾಲ್ಡೀವ್ಸ್ ನಡುವಣ ಬಾಂಧವ್ಯ ಗಟ್ಟಿಯಾಗಿದ್ದು, ಅವರ ಭೇಟಿ ಅದನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ತನ್ನ ಇಂಡಿಯಾ ಔಟ್ ಅಭಿಯಾನದ ಮೇಲೆ ಮುಯಿಝು ಅಧಿಕಾರಕ್ಕೆ ಬಂದಿದ್ದರು. ಮುಯಿಝು ಅವರು ಭಾನುವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿದರು.

- Advertisement -


ಅವರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜೂನ್ನಲ್ಲಿ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮುಯಿಝು ಅವರ ಎರಡನೇ ಭೇಟಿ ಇದಾಗಿದೆ.



Join Whatsapp