ಚೆನ್ನೈ: ಭಾರತೀಯ ವಾಯುಪಡೆಯ 92ನೇ ವಾರ್ಷಿಕೋತ್ಸವದ ನೆನಪಿನಲ್ಲಿ ಚೆನ್ನೈನ ಮರೀನಾ ಬೀಚ್ನಲ್ಲಿ ಏರ್ ಶೋ ಆಯೋಜಿಸಿತ್ತು. ಈ ವೇಳೆ ಉಸಿರುಗಟ್ಟಿ ಐವರು ಸಾವನ್ನಪ್ಪಿದ್ದು, 200ಕ್ಕೂ ಅಧಿಕ ಮಂದಿ ಮೂರ್ಛೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಏರ್ ಶೋ ವೀಕ್ಷಿಸಲು ಲಕ್ಷಾಂತರ ಜನರು ಜಮಾಯಿಸಿದ್ದರು. ಭಾರೀ ಜನಸಂದಣಿಯಿಂದಾಗಿ ಜನರಿಗೆ ಉಸಿರುಗಟ್ಟಿತ್ತು. ಸುಡುವ ಬಿಸಿಲು ಮತ್ತು ಭಾರೀ ಜನಸಂದಣಿಯಿಂದಾಗಿ ಒಟ್ಟು 230 ಜನರು ಮೂರ್ಛೆ ಹೋಗಿದ್ದಾರೆ.
ಈ ಪೈಕಿ 93 ಜನರ ಸ್ಥಿತಿ ಹದಗೆಟ್ಟಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.