ಅಮೆರಿಕ ದಾಳಿ ಮಾಡಿದರೆ ಅಣ್ವಸ್ತ್ರ ಪ್ರಯೋಗ: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಎಚ್ಚರಿಕೆ

Prasthutha|

ಪ್ಯೊಂಗ್ಯಾಂಗ್: ಅಮೆರಿಕ ದಾಳಿ ನಡೆಸಿದರೆ ತಮ್ಮ ದೇಶವು ಯಾವುದೇ ಹಿಂಜರಿಕೆಯಿಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಿದೆ ಎಂದು ಉತ್ತರ ಕೊರಿಯಾ ಮುಖಂಡ ಕಿಮ್ ಜಾಂಗ್ ಉನ್ ಎಚ್ಚರಿಕೆ ನೀಡಿದ್ದಾರೆ.

- Advertisement -


ಶತ್ರು ಪಡೆಗಳು ಉತ್ತರ ಕೊರಿಯಾದ ಸಾರ್ವಭೌಮತ್ವದ ಮೇಲೆ ಅತಿಕ್ರಮಣ ಮಾಡುತ್ತಿದ್ದರೆ, ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ನಮ್ಮಲ್ಲಿರುವ ಎಲ್ಲಾ ಆಕ್ರಮಣಕಾರೀ ಶಕ್ತಿಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಬಳಸುತ್ತೇವೆ ಎಂದು ಕಿಮ್ ಜಾಂಗ್ ಹೇಳಿದ್ದಾರೆ.


ವಿಶೇಷ ಕಾರ್ಯ ಪಡೆಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ಉತ್ತರ ಕೊರಿಯಾದ ಆಡಳಿತ ಅಂತ್ಯಗೊಳಿಸುವುದಾಗಿ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ನೀಡಿದ ಹೇಳಿಕೆಯನ್ನು ಖಂಡಿಸಿದರು.



Join Whatsapp