ಬರ್ಲಿನ್: ಜರ್ಮನಿಯಲ್ಲಿ ಒನ್ ಪ್ಲಸ್ ಫೋನ್ ಮಾರಾಟವನ್ನು ನಿಷೇಧಿಸಲಾಗಿದೆ.
ದೇಶದಲ್ಲಿ ಪೇಟೆಂಟ್ ಸಮಸ್ಯೆಗಳ ಕಾನೂನು ವಿವಾದದಿಂದಾಗಿ ಜರ್ಮನ್ ಅಧಿಕಾರಿಗಳು ಒನ್ ಪ್ಲಸ್ ಉತ್ಪನ್ನಗಳನ್ನು ನಿಷೇಧಿಸಿದ್ದಾರೆ.
ವೈರ್ ಲೆಸ್ ಸಾಧನಗಳ ಸಂಶೋಧನೆ ಮತ್ತು ಅಭಿವೃದ್ಧಿ ಕಂಪನಿಯಾದ ಇಂಟರ್ ಡಿಜಿಟ್ ಮತ್ತು ಒನ್ ಪ್ಲಸ್ ಮಧ್ಯೆ 5ಜಿ ಮತ್ತು ಮೊಬೈಲ್ ತಂತ್ರಜ್ಞಾನ ವಿಚಾರವಾಗಿ ತಿಕ್ಕಾಟ ನಡೆಯುತ್ತಿದೆ.
5ಜಿಯಲ್ಲಿ ತನ್ನ ಪೇಟೆಂಟ್ ಅನ್ನು ಒನ್ ಪ್ಲಸ್ ಉಲ್ಲಂಘಿಸಿದೆ ಎಂದು ಇಂಟರ್ ಡಿಜಿಟ್ ಆರೋಪಿಸಿದೆ. ನಿಷೇಧದಿಂದಾಗಿ ಒನ್ ಪ್ಲಸ್ ಓಪನ್, ಒನ್ ಪ್ಲಸ್ 12, ಒನ್ ಪ್ಲಸ್ 11 ಫೋನ್ ಗಳ ಮಾರಾಟವನ್ನು ಆನ್ ಲೈನ್ ಸ್ಟೋರ್ ನಿಂದಲೇ ತೆಗೆಯಲಾಗಿದೆ.
ಸದ್ಯ ಜರ್ಮನಿಯಲ್ಲಿ ಒನ್ ಪ್ಲಸ್ ಪ್ಯಾಡ್ 2 ಮತ್ತು ಒನ್ ಪ್ಲಸ್ ವಾಚ್ 2 ಮಾತ್ರ ಆನ್ ಲೈನ್ ಸ್ಟೋರ್ ನಲ್ಲಿ ಲಭ್ಯವಿದೆ. ಈ ಎರಡೂ ಉತ್ಪನ್ನಗಳಿಗೆ ಸೆಲ್ಯುಲಾರ್ ಬೆಂಬಲದ ಅಗತ್ಯ ಇಲ್ಲದ ಕಾರಣ ಇವುಗಳಿಗೆ ನಿಷೇಧ ಅನ್ವಯವಾಗುವುದಿಲ್ಲ.