ಶುಕ್ರವಾರದ ಪ್ರಾರ್ಥನೆಗೆ ಇರಾನ್ ನ ಸರ್ವೋಚ್ಛ ನಾಯಕ ಖಮೇನಿ ನೇತೃತ್ವ: ಭಾಷಣದ ಬಗ್ಗೆ ಕುತೂಹಲ

Prasthutha|

ಟೆಹ್ರಾನ್: ಇರಾನ್ ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಅವರು ಶುಕ್ರವಾರದ ಪ್ರಾರ್ಥನೆ ನೇತೃತ್ವ ನೀಡಲಿದ್ದು, ಬಳಿಕ ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ಭಾಷಣದಲ್ಲಿ ಇರಾನ್ ನ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.

- Advertisement -


ಸುಮಾರು ಐದು ವರ್ಷಗಳ ಬಳಿಕ ಖಮೇನಿ ಅವರು ಶುಕ್ರವಾರದ ಪ್ರಾರ್ಥನೆಯ ನಾಯಕತ್ವ ವಹಿಸಲಿದ್ದಾರೆ. ಕೇಂದ್ರ ಟೆಹ್ರಾನ್ ನಲ್ಲಿರುವ ಇಮಾನ್ ಖೋಮಿನಿ ಗ್ರ್ಯಾಂಡ್ ಮೊಸಲ್ಲಾ ಮಸೀದಿಯಲ್ಲಿ ಪ್ರಾರ್ಥನೆ ನಡೆಯಲಿದೆ ಎಂದು ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ.


ಈ ಹಿಂದೆ 2020ರ ಜನವರಿಯಲ್ಲಿ ಖಮೇನಿ ಶುಕ್ರವಾರದ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದರು. ಆಗ ಇಸ್ಲಾಮಿಕ್ ರೆವಲ್ಯೂಷರನರಿ ಗಾರ್ಡ್ಸ್ ಕಮಾಂಡರ್ ಖಾಸಿಂ ಸುಲೈಮಾನ್ ಹತ್ಯೆಯ ಬಳಿಕ ಇರಾಕ್ ನಲ್ಲಿದ್ದ ಅಮೆರಿದ ಸೇನಾ ನೆಲೆ ಮೇಲೆ ಇರಾನ್ ದಾಳಿ ನಡೆಸಿತ್ತು. ಈಗ ಇಸ್ರೇಲ್ ಮೇಲೆ 200ಕ್ಕೂ ಅಧಿಕ ಮಿಸೈಲ್ ದಾಳಿ ನಡೆಸಿದ ಬಳಿಕ ಮತ್ತೆ ಅವರು ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ.



Join Whatsapp