ಮಹಿಳೆಯರಿಗೆ ಗುಡ್ ನ್ಯೂಸ್: ಇದೇ ವಾರ ‘ಗೃಹ ಲಕ್ಷ್ಮಿ’ ಹಣ ಜಮೆ

Prasthutha|

ಬೆಳಗಾವಿ: ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಎರಡು ತಿಂಗಳ ಹಣ ಅಕ್ಟೋಬರ್‌ನಲ್ಲಿ ಜಮೆಯಾಗಲಿದೆ.

- Advertisement -

ಮೂಡಲಗಿ ತಾಲೂಕಿನ ಕಲ್ಲೋಳ್ಳಿಯಲ್ಲಿ ಮಾತನಾಡಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಇದೇ ಅ.7 ಮತ್ತು 9 ರಂದು ಎರಡೂ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗಲಿದೆ ಎಂದು ತಿಳಿಸಿದರು.

ತಾಂತ್ರಿಕ ಕಾರಣದಿಂದ ಎರಡು ತಿಂಗಳ ಕಂತಿನ ಹಣ ತಡವಾಗಿತ್ತು. ಈ ತಿಂಗಳು ಜುಲೈ ಮತ್ತು ಆಗಸ್ಟ್ ಕಂತಿನ ಹಣ ಜಮೆಯಾಗಲಿದೆ ಎಂದು ಹೇಳಿದರು.



Join Whatsapp