ಟೋಕಿಯೊ: ಎರಡನೆ ವಿಶ್ವ ಯುದ್ಧದ ಸಂದರ್ಭದಲ್ಲಿ ಅಮೆರಿಕ ಹಾಕಿದ್ದ ಬಾಂಬೊಂದು ಸ್ಫೋಟಗೊಂಡಿದೆ.
ನೆಲದಲ್ಲಿ ಹುದುಗಿ ಹೋಗಿದ್ದ ಅಮೆರಿಕ ಹಾಕಿದ್ದ ಬಾಂಬೊಂದು ಸ್ಫೋಟಗೊಂಡಿದ್ದರಿಂದ, ಜಪಾನ್ ವಿಮಾನ ನಿಲ್ದಾಣದ ಟ್ಯಾಕ್ಸಿವೇಯಲ್ಲಿ ಭಾರಿ ಕುಳಿ ಸೃಷ್ಟಿಯಾಗಿದ್ದು, 80ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡಿವೆ.
ಆದರೆ, ಯಾವುದೇ ಗಾಯಗಳಾಗಿಲ್ಲ ಎಂದು ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ಯ ಜಪಾನ್ ನಲ್ಲಿರುವ ವಿಮಾನ ನಿಲ್ದಾಣದಲ್ಲಿ 500 ಪೌಂಡ್ ತೂಕದ ಬಾಂಬ್ ಸ್ಫೋಟಗೊಂಡಾಗ ಹತ್ತಿರದಲ್ಲಿ ಯಾವುದೇ ವಿಮಾನಗಳಿರಲಿಲ್ಲ. ಘಟನೆಯಿಂದ ಯಾರೂ ಗಾಯಗೊಂಡಿಲ್ಲ. ಸ್ಫೋಟದಿಂದ ಟ್ಯಾಕ್ಸಿ ಮಾರ್ಗದಲ್ಲಿ ಸುಮಾರು 7 ಮೀಟರ್ ಆಳ ಮತ್ತು 3 ಅಡಿ ಆಳದ ಕುಳಿ ಉಂಟಾಗಿದೆ. ಎರಡನೇ ವಿಶ್ವಯುದ್ಧದಲ್ಲಿ ಅಮೆರಿಕವು ಜಪಾನ್ನ ಮೇಲೆ ಹಾಕಿದ ಬಾಂಬ್ಗ ಳಲ್ಲಿ ಸ್ಫೋಟಗೊಳ್ಳದ ಕೆಲವು ಬಾಂಬ್ ಗಳನ್ನು ವಿಮಾನ ನಿಲ್ದಾಣದ ಸ್ಥಳದಲ್ಲಿ ಹುಗಿಯಲಾಗಿತ್ತು ಎಂದು ವರದಿಯಾಗಿದೆ.