ಇರಾನ್-ಇಸ್ರೇಲ್ ಸಂಘರ್ಷ: ಷೇರುಪೇಟೆ ತಲ್ಲಣ

Prasthutha|

►ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಕೆ

- Advertisement -


ಟೆಲ್ ಅವೀವ್: ಇರಾನ್-ಇಸ್ರೇಲ್ ಯುದ್ಧವು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ.


ಇರಾನ್ ದಾಳಿ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲದ ಬೆಲೆ ಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮಧ್ಯಪ್ರಾಚ್ಯದ ಸಂಘರ್ಷವು ತೈಲ ಪೂರೈಕೆ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಬಹುದು ಎಂಬ ಭೀತಿ ಆವರಿಸಿದೆ. ಪರಿಣಾಮವೆಂಬಂತೆ, ಬುಧವಾರ ಕಚ್ಚಾ ತೈಲದ ಬೆಲೆ ಶೇ.5ರಷ್ಟು ಹೆಚ್ಚಳವಾಗಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲ ಬೆಲೆ ಶೇ.5 ಏರಿಕೆಯಾಗಿದ್ದು, ಬ್ಯಾರೆಲ್ ಗೆ 75 ಡಾಲರ್(6,297 ರೂ.)ಗೆ ತಲುಪಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ 156ರೂ. ಏರಿಕೆಯಾಗಿ, ಬ್ಯಾರೆಲ್ ಗೆ 6,177ರೂ. ಆಗಿದೆ.

- Advertisement -


ಇನ್ನು, ಯುದ್ಧದ ಕಾರ್ಮೋಡವು ಜಾಗತಿಕ ಷೇರು ಮಾರುಕಟ್ಟೆ ಮೇಲೂ ಪ್ರಭಾವ ಬೀರಿದೆ. ಅಮೆರಿಕದ ಷೇರು ಶೇ.1 ಕುಸಿತ ಅನುಭವಿಸಿದೆ. ಟೋಕಿಯೊ, ಸಿಡ್ನಿ ಷೇರು ಮಾರುಕಟ್ಟೆಗಳೂ ಪತನಗೊಂಡಿವೆ. ರಕ್ಷಣ ಕ್ಷೇತ್ರದ ಷೇರುಗಳು ಮಾತ್ರ ಚೇತರಿಸಿಕೊಂಡಿವೆ. ನಾರ್ತ್ರಾಪ್ ಗ್ರಮ್ಮನ್ ಶೇ.3, ಲಾಕ್ಹೀಡ್ ಮಾರ್ಟಿನ್ ಶೇ.3.6 ಸೇರಿದಂತೆ ರಕ್ಷಣ ವಲಯದ ಕಂಪೆನಿಗಳ ಷೇರು ಮೌಲ್ಯ ಹೆಚ್ಚಳವಾಗಿವೆ.



Join Whatsapp