ಮನೆಗೆ ನುಗ್ಗಲು ಯತ್ನಿಸಿದ ದರೋಡೆಕೋರರನ್ನು ಹಿಮ್ಮೆಟ್ಟಿಸಿದ ಮಹಿಳೆ..!

Prasthutha|

ಅಮೃತಸರ: ಮನೆಗೆ ನುಗ್ಗಲು ಯತ್ನಿಸಿದ ಮೂವರು ದರೋಡೆಕೋರರನ್ನು ಮಹಿಳೆಯೊಬ್ಬರು ಹಿಮ್ಮೆಟ್ಟಿಸಿರುವ ಘಟನೆ ಅಮೃತಸರದಲ್ಲಿ ನಡೆದಿದೆ.

- Advertisement -

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಿಳೆಯು ಟೆರೇಸ್ ಮೇಲೆ ಬಟ್ಟೆಯನ್ನು ಒಣಗಿ ಹಾಕುತ್ತಿರುವಾಗ, ಮುಖಗವಸು ತೊಟ್ಟಿರುವ ಮೂವರು ಯುವಕರು ಹೊರಗಿನಿಂದ ಮನೆಯೊಳಗೆ ನುಗ್ಗಲು ಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ.

- Advertisement -

ದಿಢೀರನೆ ಓರ್ವ ನುಸುಳುಕೋರ ಗೋಡೆಯ ಮೇಲಿಂದ ಕೆಳಗೆ ಜಿಗಿದಿದ್ದು, ಮುಖ್ಯ ದ್ವಾರದ ಮೂಲಕ ಮನೆಯೊಳಗೆ ಪ್ರವೇಶಿಸಲು ಯತ್ನಿಸಿದ್ದಾನೆ.

ಆಗ ಒಂದು ಕ್ಷಣವೂ ತಡ ಮಾಡದ ಮಹಿಳೆಯು ನೆಲಮಹಡಿಗೆ ಓಡಿ ಬಂದಿದ್ದು, ನುಸುಳುಕೋರನು ಬಾಗಿಲನ್ನು ನೂಕುವುದರೊಳಗೆ, ಬಾಗಿಲಿನ ಚಿಲಕ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮಹಿಳೆಯ ಧೈರ್ಯ ಮತ್ತು ಕ್ಷಿಪ್ರ ಕಾರ್ಯಾಚರಣೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.



Join Whatsapp