ಇಸ್ರೇಲ್‌ ಮೇಲೆ ಮೊದಲ ಬಾರಿಗೆ ಹೈಪರ್‌ ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ ಇರಾನ್‌

Prasthutha|

ಟೆಹರಾನ್‌: ಇಸ್ರೇಲ್‌ ಮೇಲೆ ಇರಾನ್‌ ಇದೇ ಮೊದಲ ಬಾರಿಗೆ ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿ ದಾಳಿ ನಡೆಸಿದೆ.

- Advertisement -

ಇಸ್ರೇಲ್‌ ಮೇಲೆ ನಾವು ಹೈಪರ್‌ ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ್ದೇವೆ ಎಂದು IRGC ತಿಳಿಸಿದೆ.

ಇಸ್ರೇಲಿನ ಐರನ್‌ಡೋಮ್‌ ತಪ್ಪಿಸಲು ಫತಾಹ್ ಹೈಪರ್‌ಸಾನಿಕ್‌ ಕ್ಷಿಪಣಿಯನ್ನು ಇರಾನ್‌ ಬಳಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಶಬ್ದಕ್ಕಿಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೈಪರ್‌ ಸಾನಿಕ್‌ ಕ್ಷಿಪಣಿಗಳಿಗಿದ್ದು ಇರಾನ್‌ ಕಳೆದ ವರ್ಷದ ಜೂನ್‌ನಲ್ಲಿ ಫತಾಹ್-1, ನವೆಂಬರ್‌ನಲ್ಲಿ ಫತಾಹ್- 2 ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಬಳಸಲಾದ 80-90% ಕ್ಷಿಪಣಿಗಳು ನಿಗದಿತ ಗುರಿಯನ್ನು ಹೊಡೆದು ಹಾಕಿವೆ ಎಂದು IRGC ಹೇಳಿಕೊಂಡಿದೆ.

ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ ನಲ್ಲಿರುವ ಗುಪ್ತಚರ ಸಂಸ್ಥೆ ಮೊಸ್ಸಾದ್ ಕೇಂದ್ರ ಕಚೇರಿ, ಅಮೆರಿಕ ನಿರ್ಮಿಸಿದ ಎಫ್‌ 16 ವಿಮಾನಗಳನ್ನು ನಿಲ್ಲಿಸಿರುವ ಏರ್‌ ಬೇಸ್‌ ಹೌಸ್‌ ಗಳನ್ನು ಗುರಿಯಾಗಿಸಿ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಗಳು ಪ್ರಕಟವಾಗಿದೆ.



Join Whatsapp